Breaking News : ಇವರಿಗೆ ಒಲಿಯಲಿದೆ ಕೆಪಿಸಿಸಿ ಪಟ್ಟ..!

21 Jun 2018 12:17 PM | Politics
11204 Report

ಲೋಕಸಭೆ ಚುನಾವಣೆ ಯಂತಹ ಸವಾಲು ಮುಂದಿರುವ ಕಠಿಣ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಕಿರಿಯರಿಗೆ ನೀಡುವುದು ಬೇಡ. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವೇಳೆ ಹಿರಿಯರು ಹಾಗೂ ಸಂಸದರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಹೈಕಮಾಂಡ್‌ಗೆ ಒತ್ತಾಯಿಸಲು ಹಿರಿಯ ಸಂಸದರು ಸಭೆ ನಡೆಸಿ ನಿರ್ಧರಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದ ರಾಜ್ಯಸಭೆ ಹಾಗೂ ಲೋಕಸಭೆಯ ಹಿರಿಯ ಸದಸ್ಯರು, ದಿನೇಶ್ ಗುಂಡೂರಾವ್ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಲಾಬಿ ನಡೆಸುತ್ತಿರುವ ಕಿರಿಯರ ಗುಂಪಿನ ವಿರುದ್ಧ ಒಗ್ಗೂಡುವ ತೀರ್ಮಾನವನ್ನು ಕೈಗೊಂಡರು ಎಂದು ಮೂಲಗಳು ತಿಳಿಸಿವೆ. ಲೋಕಸಭೆ ಚುನಾವಣೆಯಂತಹ ಕಠಿಣ ಸವಾಲು ಮುಂದಿರುವ ಹಿನ್ನೆಲೆಯಲ್ಲಿ ಹಿರಿಯರು ಹಾಗೂ ಕಿರಿಯರನ್ನು ಸಮನ್ವಯತೆಯಿಂದ ಕೊಂಡೊಯ್ಯುವ ಸಾಮರ್ಥ್ಯವಿರುವ ವ್ಯಕ್ತಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು. ಲಿಂಗಾಯತರಿಗೆ ಹಾಗೂ ಉತ್ತರ ಕರ್ನಾಟಕದವರಿಗೆ ನೀಡುವುದಾದರೆ ಎಂ.ಬಿ. ಪಾಟೀಲ್ ಅಥವಾ ಎಚ್.ಕೆ. ಪಾಟೀಲ್ ಹೆಸರು ಪರಿಗಣಿಸಬೇಕು. ದಕ್ಷಿಣ ಭಾಗದವರಿಗೆ ಅವಕಾಶ ನೀಡುವುದಾದರೆ ಬಿ.ಕೆ. ಹರಿಪ್ರಸಾದ್ ಅಥವಾ ಕೆ.ಎಚ್. ಮುನಿಯಪ್ಪ ಅವರಿಗೆ ಅವಕಾಶ ನೀಡುವಂತೆ ಹೈಕಮಾಂಡ್‌ಗೆ ಸಲಹೆ ನೀಡೋಣ. ಆದರೆ, ಕೃಷ್ಣ ಬೈರೇ ಗೌಡ, ರಿಜ್ವಾನ್ ಹರ್ಷದ್ ಅವರ ಗುಂಪು ದಿನೇಶ್ ಗುಂಡು ರಾವ್ ಪರ ಲಾಬಿ ಯಶಸ್ವಿಯಾಗಲು ಬಿಡದಂತೆ ಚರ್ಚೆಗಳು ನಡೆದವು ಎಂದು ಮೂಲಗಳು ತಿಳಿಸಿವೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಾಬಲ್ಯ ಹಾಗೂ ಹಾಲಿ ಕಾಂಗ್ರೆಸ್ ಸಂಸದರು ಇರುವ ಏಳು ಕ್ಷೇತ್ರಗಳನ್ನು ಬಿಟ್ಟು ಕೊಡಲು ಜೆಡಿಎಸ್ ಕೇಳಿದೆ.

Edited By

Shruthi G

Reported By

Shruthi G

Comments