ರೈತರಿಗೆ ಸಿಹಿ ಸುದ್ದಿ : ಮೋದಿ ಸರ್ಕಾರದಿಂದ ಸಿಕ್ತು ಕೃಷಿಗೆ ಭರ್ಜರಿ ಕೊಡುಗೆ..!

21 Jun 2018 9:30 AM | Politics
486 Report

ರೈತರ ಆದಾಯವನ್ನು 2022ರ ವೇಳೆಗೆ ದ್ವಿಗುಣಗೊಳಿಸುವ ಗುರಿ ಸಾಧಿಸಲು ಕೃಷಿ ವಲಯಕ್ಕೆ ಮೀಸಲಿಟ್ಟಿರುವ ಬಜೆಟ್‌ ಅನ್ನು ಕೇಂದ್ರ ಸರ್ಕಾರವು ದುಪ್ಪಟ್ಟುಗೊಳಿಸಿ 2.12 ಲಕ್ಷ ಕೋಟಿ ರು.ಗಳಿಗೆ ಏರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ಕರ್ನಾಟಕ ಸೇರಿದಂತೆ ದೇಶದ 600 ಜಿಲ್ಲೆಯ ರೈತರ ಜೊತೆ ಪ್ರಧಾನಿ ಮೋದಿಯವರು  ಸಂವಾದ ನಡೆಸಿದರು. ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಿಂದ  ಬೆಳೆಗಳಿಗೆ ಯೋಗ್ಯ ಬೆಲೆ, ಕೃಷಿ ಉತ್ಪನ್ನಗಳು ಹಾಳಾಗದಂತೆ ಸಂರಕ್ಷಣೆ ಮತ್ತು ಅದಾಯದ ಪರ್ಯಾಯ ಮಾರ್ಗ ಹುಡುಕುವುದು ಈ ರೀತಿಯ ಕ್ರಮಗಳನ್ನು ಸರ್ಕಾರವು ಕೈಗೊಂಡಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಕೃಷಿ ವಲಯಕ್ಕೆ ತಮ್ಮ ಸರ್ಕಾರ 2.12 ಲಕ್ಷ ಕೋಟಿ ರೂ ಅನುದಾನವನ್ನು ಒದಗಿಸಿದೆ. 2018​-19ನೇ ಸಾಲಿನ ಹಣಕಾಸು ವರ್ಷದಲ್ಲಿ ಕೃಷಿ ಉತ್ಪನ್ನಕ್ಕೆ ತಗುಲುವ ವೆಚ್ಚಕ್ಕಿಂತ ಶೇ.150 ರಷ್ಟುಬೆಲೆ ದೊರೆಯುವಂತೆ ನೋಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರ ಆದಾಯವನ್ನು 2022ರ ವೇಳೆಗೆ ದ್ವಿಗುಣಗೊಳಿಸುವ ನಿಟ್ಟಿನಿಂದ ಸರ್ಕಾರ ಕಾರ್ಯನಿರತವಾಗಿದೆ. ರೈತರಿಗೆ ಯಾವ ನೆರವು ಬೇಕಿದ್ದರೂ ಕೂಡ ಒದಗಿಸಲಾಗುವುದು. ರೈತರಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ ಎಂದು ತಿಳಿಸಿದರು.

Edited By

Manjula M

Reported By

Manjula M

Comments