ಜನತಾದರ್ಶನದಲ್ಲಿ ಸದ್ಯಕ್ಕಿಲ್ಲ ಸಿಎಂ ಕುಮಾರಸ್ವಾಮಿಯ ದರ್ಶನ..!

12 Jun 2018 9:37 AM | Politics
389 Report

ಸಮ್ಮಿಶ್ರ ಸರ್ಕಾರದ ರಚನೆಯ ಹಿನ್ನಲೆಯಲ್ಲಿ ಬಜೆಟ್‌ನ ಪೂರ್ವ ತಯಾರಿಯನ್ನು ನಡೆಸುತ್ತಿದ್ದಾರೆ. ಪ್ರತಿನಿತ್ಯ ಮುಖ್ಯಮಂತ್ರಿಗಳು ನಡೆಸುತ್ತಿದ್ದ  ಜನತಾ ದರ್ಶನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದಿದ್ದಾರೆ.

ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಬಜೆಟ್‌ ಪೂರ್ವ ತಯಾರಿಯಲ್ಲಿ ತಮ್ಮನ್ನು ತಾವು  ತೊಡಗಿಸಿಕೊಳ್ಳಲಿದ್ದಾರೆ. ಆಯವ್ಯಯ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕಾಗಿರುವ ಕಾರಣವಾಗಿ  ಬಜೆಟ್‌ ಅಧಿವೇಶನ ಮುಕ್ತಾಯಗೊಳ್ಳುವವರೆಗೆ ಜನತಾ ದರ್ಶನ ಮತ್ತು ಸಾರ್ವಜನಿಕ ಭೇಟಿಯನ್ನು ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸೋಮವಾರ ಪ್ರಕಟಣೆಯನ್ನು ನೀಡಿದೆ. ಕುಮಾರಸ್ವಾಮಿ ಅವರು ಸಿಎಂ ಆಗಿ  ಪ್ರಮಾಣ ವಚನ ಸ್ವೀಕರಿಸುವ  ವೇಳೆಯಲ್ಲಿ  ನಿತ್ಯ ಜನತಾದರ್ಶನ ನಡೆಸುವುದಾಗಿ ತಿಳಿಸಿದ್ದರು. ಕೊಟ್ಟ ಮಾತಿನಂತೆಯೇ ಬೆಂಗಳೂರಿನಲ್ಲಿದ್ದಾಗ ಕುಮಾರಸ್ವಾಮಿ ಅವರು ನಿತ್ಯ ಜನತಾದರ್ಶನವನ್ನು ಮಾಡುತ್ತಿದ್ದರು. ಆದರೆ, ಜನತಾ ದರ್ಶನಕ್ಕಾಗಿಯೇ ಹೆಚ್ಚಿನ ಸಮಯ ವ್ಯಯವಾಗುತ್ತಿದ್ದುದರಿಂದ ಸದ್ಯಕ್ಕೆ ಮುಂದೂಡಲು ನಿರ್ಧರಿಸಲಾಯಿತು ಎಂಬ ಮಾಹಿತಿಗಳು ತಿಳಿದು ಬಂದಿವೆ.

Edited By

Manjula M

Reported By

Manjula M

Comments