ಬಿ.ಎಸ್.ವೈ ಗೆ ಖಡಕ್ ಎಚ್ಚರಿಕೆ ಕೊಟ್ಟ ಸಚಿವ ಡಿ.ಕೆ. ಶಿವಕುಮಾರ್

10 Jun 2018 5:29 PM | Politics
21731 Report

ಯಡಿಯೂರಪ್ಪನವರು ಪದೇ ಪದೇ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನ ಶಾಸಕರು ನಮ್ಮ ಜೊತೆಗೆ ಸೇರಲು ಸಿದ್ದವಾಗಿದ್ದಾರೆ ಅಂತ ಮಾತುಗಳಿಗೆ ಸಂಬಂಧಪಟ್ಟಂತೆ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದು, ಅವರು ಮಾತನಾಡುತ್ತಿರುವುದು ಅವರ ಸ್ಥಾನಕ್ಕೆ ಶೋಭೆ ತರುವಂತಹದಲ್ಲ. ನಾವು ಕೂಡ ನಮ್ಮ ಜೊತೆಗೆ ಬಿಜೆಪಿ ಶಾಸಕರು ಸಂಪರ್ಕದಲ್ಲಿ ಇದ್ದಾರೆ ಅಂತ ಹೇಳಿಕೆ ನೀಡಬಹುದು. ಆದರೆ ಅದು ಜನರನ್ನು ದಾರಿ ತಪ್ಪಿಸುವ ಕೆಲಸಕ್ಕಾ ಜನಪ್ರತಿನಧಿಗಳು ಮುಂದಾಗಬಾರದು ಅಂತ ಹೇಳಿದರು.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್ ಅವರು, ನಾಳೆಯಿಂದ ನನಗೆ ಪಕ್ಷ ನೀಡಿರುವ ಬೃಹತ್ ನೀರಾವರಿ ಖಾತೆ ಬಗ್ಗೆ ಕೆಲಸ ಆರಂಭಿಸುವೆ, ತುಂಬಾ ದೊಡ್ಡಮಟ್ಟದ ಖಾತೆಯಾಗಿದ್ದು, ಇದನ್ನು ನಿಭಾಯಿಸುವುದಕ್ಕೆ ಹೆಚ್ಚಿನ ಶ್ರಮ ಬೇಕಾಗುತ್ತದೆ ಅಂತ ತಿಳಿಸಿದರು. ಇದೇ ವೇಳೆ ಅವರು ಎಂ.ಬಿ. ಪಾಟೀಲ್ ಅಸಮಾಧಾನಕ್ಕೆ ಸಂಬಂಧಪಟ್ಟಂತೆ ಮಾತನಾಡಿ ಖಾತೆ ಹಂಚಿಕೆ ನಂತರ ಹೀಗೆ ಆಗುವುದು ಸಹಜ, ಸ್ವಲ್ಪ ದಿವಸ ಕಾಯಬೇಕು ಎಲ್ಲವೂ ಸರಿಹೋಗುವುದು ಎಂದು ಹೇಳಿದರು

Edited By

Shruthi G

Reported By

Shruthi G

Comments