ಬಿಗ್ ಬ್ರೇಕಿಂಗ್: ಸಚಿವ ಸಂಪುಟ ವಿಸ್ತರಣೆಯ 6 ಸ್ಥಾನಗಳ ಕುರಿತು ಹೈ ಕಮಾಂಡ್ ತೆಗೆದುಕೊಂಡ ಮಹತ್ವದ ನಿರ್ಧಾರ..!

09 Jun 2018 2:58 PM | Politics
11462 Report

ಈಗಾಗಲೇ ಸಚಿವ ಸಂಪುಟ ರಚನೆಯಾಗಿದ್ದು ಸಚಿವ ಸ್ಥಾನದಿಂದ ವಂಚಿತರಾಗಿರುವರು ಬಂಡಾಯವೇಳುವ ಎಲ್ಲಾ ಸಾಧ್ಯತೆಗಳು ಇರುವುದರಿಂದ ಶೀಘ್ರದಲ್ಲೆ ಕಾಂಗ್ರೆಸ್ ಖೋಟಾದಲ್ಲಿ ಖಾಲಿ ಉಳಿದಿರುವಂತಹ ಆರು ಸಚಿವ ಸ್ಥಾನಗಳನ್ನು ಭರ್ತಿ ಮಾಡುವುದಕ್ಕೆ ಕಾಂಗ್ರೆಸ್ ಹೈ ಕಮಾಂಡ್ ಈಗಾಗಲೇ ನಿರ್ಧಾರ ಮಾಡಿದೆ ಎನ್ನಲಾಗಿದೆ.

ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ಪಾಲಿಗೆ ಬಂದಿರುವಂತಹ ಸ್ಥಾನಗಳ ಪೈಕಿ 6 ಸ್ಥಾನವನ್ನು ಇನ್ನೂ ಬಾಕಿ ಉಳಿಸಿಕೊಳ್ಳಲಾಗಿದೆ. ತಕ್ಷಣವೇ ಅತೃಪ್ತರಿಗೆ ಸ್ಥಾನಮಾನವನ್ನು ನೀಡಿದರೆ ಈ ಒತ್ತಡಕ್ಕೆ ಹೈಕಮಾಂಡ್‌ ಮಣಿಯಿತು ಎಂಬ ಸಂದೇಶವು ಕೂಡ ರವಾನೆಯಾಗುತ್ತದೆ. ಹಾಗಾಗಿ ಮಾಜಿ ಸಚಿವರಾದ ಎಂಬಿ ಪಾಟೀಲ್ ಮತ್ತು ಅವರ ತಂಡ ಪಕ್ಷದಲ್ಲಿ ಬಂಡಾಯದ ಬಾವುಟವನ್ನು ಹಾರಿಸಿದ್ದಾರೆ.ಇದೇ ಕಾರಣಕ್ಕಾಗಿ ಅತೃಪ್ತ ಶಾಸಕರ ಪೈಕಿ ಹಿರಿಯರು ಹಾಗೂ ಈ ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸದೇ ಇರುವವರನ್ನು ವಿಶ್ವಾಸಕ್ಕೆ ತೆಗೆಕೊಳ್ಳುವ ದೃಷ್ಟಿಯಿಂದ ಮತ್ತೊಂದು ಹಂತದ ಸಂಪುಟ ವಿಸ್ತರಣೆಗೆ ಸದ್ಯದಲ್ಲೆ ಮುಹೂರ್ತ ನಿಗಧಿಯಾಗಬಹುದು ಎಂದು ಹೇಳಿದ್ದಾರೆ.

Edited By

Manjula M

Reported By

Manjula M

Comments