ಜೆಡಿಎಸ್ ಗೆ ಬಿಗ್ ಶಾಕ್: ರಾಜೀನಾಮೆಗೆ ಮುಂದಾದ ಸಚಿವ..!

09 Jun 2018 10:20 AM | Politics
389 Report

ಮೈತ್ರಿ ಸರ್ಕಾರದ ಸಚಿವ ಸಂಪುಟ ರಚನೆಯಾದ ದಿನದಿಂದಲೂ ಕೆಲವು ಶಾಸಕರಲ್ಲಿ ಸಾಕಷ್ಟು ಅಸಮಾಧಾನ , ಗೊಂದಲುಗಳು ಸೃಷ್ಟಿಯಾಗಿದ್ದವು. ಖಾತೆ ಹಂಚಿಕೆ ವಿಷಯದಲ್ಲಿ ಜೆಡಿಎಸ್‌ನಲ್ಲಿಯೂ ಅಸಮಾಧಾನ ಹೆಚ್ಚಿದ್ದು, ಸಣ್ಣ ನೀರಾವರಿ ಖಾತೆ ಸಿಕ್ಕಿದ್ದಕ್ಕೆ ಸಚಿವರಾದ ಸಿ.ಎಸ್.ಪುಟ್ಟರಾಜು ತುಂಬಾ ಅಸಮಾಧಾನಗೊಂಡಿದ್ದಾರೆ.

ಸಾರಿಗೆ ಖಾತೆ ನಿರೀಕ್ಷೆಯಲ್ಲಿದ್ದ ಸಿಎಸ್.ಪುಟ್ಟರಾಜು, ರಾತ್ರಿಯಿಂದಲೇ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಯಾರ ಸಂಪರ್ಕಕ್ಕೂ ಸಿಗದೇ ಅಸಮಾಧಾನ ಹೊರಹಾಕುತ್ತಿರುವ ಅವರು, ತಮಗೆ ನೀಡಿದ್ದ ಸರ್ಕಾರಿ ಕಾರನ್ನು ಕೂಡ ವಾಪಸ್ ಮಾಡಿದ್ದಾರೆ. ಪುಟ್ಟರಾಜು ಪತ್ನಿ, ಪುಟ್ಟರಾಜು ಕಾರ್ ಡ್ರೈವರ್ ಮೊಬೈಲ್‌ಗಳು ಕೂಡ ಸ್ವಿಚ್ ಆಫ್ ಆಗಿದ್ದು, ತಮ್ಮ ಖಾಸಗಿ ಕಾರಿನಲ್ಲಿ ಬೇರೆ ಸ್ಥಳಕ್ಕೆ ಪುಟ್ಟರಾಜು ಹೋಗಿದ್ದಾರೆ. ಮಂಡ್ಯ ಜಿಲ್ಲೆ ಮೇಲುಕೋಟೆ ಕ್ಷೇತ್ರದ ಶಾಸಕರಾಗಿರುವ ಪುಟ್ಟರಾಜು,  ತಮ್ಮ ಆಪ್ತರ ಬಳಿ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ. ಇದರ ನಡುವೆ ಯಾರ ಕೈಗೂ ಸಿಗದೆ ಮುನಿಸಿಕೊಂಡಿರುವ ಪುಟ್ಟರಾಜುರವರ ಸಂಪರ್ಕಕ್ಕೆ ಮುಖ್ಯಮಂತ್ರಿಯಾದ ಎಚ್ ಡಿ ಕುಮಾರಸ್ವಾಮಿ ಪ್ರಯತ್ನವನ್ನು ನಡೆಸಿದ್ದಾರೆ. ಜೊತೆಗೆ ಸಚಿವ ಸಾ.ರಾ.ಮಹೇಶ್‌ಗೆ ಪುಟ್ಟರಾಜು ಸಂಪರ್ಕಿಸಿ ಮಾತನಾಡಲು ಸಿಎಂ ಸೂಚನೆಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

Edited By

Manjula M

Reported By

Manjula M

Comments