ಕೂತುಹಲ ಕೆರಳಿಸಿದ ಅಂಬಿ ,ಎಂ ಬಿ ಪಾಟೀಲ್ ಭೇಟಿ ..!

08 Jun 2018 10:22 AM | Politics
412 Report

ನೂತನ ಸಮ್ಮಿಶ್ರ ಸರ್ಕಾರದ ಸಂಪುಟ ರಚನೆಯಾದ ಹಿನ್ನಲೆಯಲ್ಲಿ ಮನೆಮಾಡಿರುವ ಅತೃಪ್ತಿ, ಆಕ್ರೋಶ ಹೆಚ್ಚಾಗಿದ್ದು, ಮಾಜಿ ಸಚಿವ ಎಂ.ಬಿ.ಪಾಟೀಲ್ ಫುಲ್ ಗರಂ ಆಗಿದ್ದಾರೆ.

ಕಳೆದ ಗುರುವಾರ ರಾತ್ರಿ ರೆಬಲ್ ಸ್ಟಾರ್ ಅಂಬರೀಶ್  ಮತ್ತು ರಾಕ್ ಲೈನ್ ವೆಂಕಟೇಶ್, ಜಮಿರ್ ಅಹ್ಮದ್, ಕೃಷ್ಣಭೈರೇಗೌಡ, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯಕ್, ಜಾರಕಿಹೊಳಿ ಮತ್ತಿತರರು ಸದಾಶಿವನಗರದಲ್ಲಿರುವ ಎಂ.ಬಿ. ಪಾಟೀಲ್ ಅವರ ಮನೆಗೆ ಭೇಟಿ ನೀಡಿ ಸಮಾಧಾನವನ್ನು ಹೇಳಿದ್ದಾರೆ. ಎಂ.ಬಿ.ಪಾಟೀಲ್ ಅವರ ಭೇಟಿ ಬಳಿಕ ಕೃಷ್ಣ ಭೈರೇಗೌಡ ಮಾಧ್ಯಮದವರೊಂದಿಗೆ ಮಾತನಾಡಿ, ಎಂ.ಬಿ.ಪಾಟೀಲ್ ಗೆ ಅಸಮಾಧಾನವಿರುವುದು ನಿಜ ಆದರೆ ಈ ಬಗ್ಗೆ ನಮ್ಮ ವರಿಷ್ಠರಿಗೆ ಮನವರಿಕೆ ಮಾಡಿಕೊಡ್ತೀವಿ. ಎಂ.ಬಿ.ಪಾಟೀಲ್ ಅವರಿಗೆ ಕೇವಲ ಮಂತ್ರಿ ಸ್ಥಾನ ಅಲ್ಲ, ಅವರಿಗೆ ಕಾಂಗ್ರೆಸ್ ನಲ್ಲಿಯೂ ಕೂಡ ಉತ್ತಮ ಭವಿಷ್ಯವಿದೆ ಎಂದಿದ್ದಾರೆ. ಸದ್ಯ ಅವರನ್ನು ಮನವೊಲಿಸುವ ಪ್ರಯತ್ನವನ್ನು ಮಾಡಿದ್ದೇವೆ. ಅವರು ನಮ್ಮ ಮಾತು ಕೇಳುತ್ತಾರೆಂಬ ನಂಬಿಕೆ ಇದೆ ಎಂದು ತಿಳಿಸಿದರು.

Edited By

Manjula M

Reported By

Manjula M

Comments