ಸಚಿವ ಸಂಪುಟ ರಚನೆ ಬೆನ್ನಲ್ಲೆ ‘ಕೈ’ ನಾಯಕರಿಂದ ಬಿಗ್ ಶಾಕ್ ..!

07 Jun 2018 9:55 AM | Politics
1282 Report

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ಸಂಪುಟ ರಚನೆಯಾದ ಬೆನ್ನಲ್ಲೇ ಸಾಕಷ್ಟು  ಭಿನ್ನಮತಗಳು ತಲೆ ಎತ್ತಿದ್ದವು. ಸಚಿವ ಸ್ಥಾನ ಕೈತಪ್ಪಿದ ಎರಡು ಪಕ್ಷಗಳಲ್ಲಿನ ಆಕಾಂಕ್ಷಿಗಳು ಬೇಸರವನ್ನು ವ್ಯಕ್ತ ಆಗಿದ್ದವು. , ಕೆಲವರು ಪಕ್ಷ ಬಿಡುವ ಮಾತುಗಳನ್ನು ಕೂಡ ಆಡಿದ್ದರು ಎನ್ನಲಾಗಿದೆ.

ಹೆಚ್.ಕೆ. ಪಾಟೀಲ್, ಎಂ.ಬಿ.ಪಾಟೀಲ್, ತಮ್ಮ ತಮ್ಮ ಬೆಂಬಲಿಗರ ಜೊತೆ ಪ್ರತ್ಯೇಕವಾಗಿ ಸಭೆಯನ್ನು ನಡೆಸಿ, ಕಾಂಗ್ರೆಸ್ ಹೈಕಮಾಂಡ್ ಗೆ 3 ದಿನಗಳ ಸಮಯಾವಕಾಶ ನೀಡಿದ್ದಾರಂತೆ. ಅಷ್ಟರಲ್ಲಿ ಕ್ಷೇತ್ರಕ್ಕೆ ಹೋಗಿ ಅಲ್ಲಿರುವ ಬೆಂಬಲಿಗರ ಜೊತೆ ಮಾತನಾಡಿ, ಪಕ್ಷಕ್ಕೆ ರಾಜೀನಾಮೆ ಕೊಡಬೇಕಾ ಇಲ್ಲಾ ಬೇರೆ ಪಕ್ಷಕ್ಕೆ ಹೋಗಬೇಕಾ ಎಂಬುದರ ಬಗ್ಗೆ ತೀರ್ಮಾನಿಸುತ್ತೇವೆ ಎಂದು ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ. ಕುಂದಗೋಳ ಶಾಸಕ ಶಿವಳ್ಳಿ, ಪಕ್ಷದಲ್ಲಿ ನನಗೆ ನ್ಯಾಯ ಸಿಗುವವರೆಗೂ ನಾನೂ ಬಿಡುವುದಿಲ್ಲ ಎಂದಿದ್ದಾರೆ. ಈ ಮಧ್ಯೆ ಸತೀಶ್ ಜಾರಕಿಹೊಳಿ, ಹ್ಯಾರಿಸ್, ಬಿ.ಸಿ. ಪಾಟೀಲ್, ಬಿ. ನಾಗೇಂದ್ರ ಸೇರಿದಂತೆ ಇನ್ನೂ ಹಲವು ಅತೃಪ್ತ ಶಾಸಕರು ಬೆಂಗಳೂರಿನಲ್ಲಿರುವ ಶಾಂಗ್ರಿಲಾ ಹೋಟೆಲ್ ನಲ್ಲಿ ಸಭೆಯನ್ನು ನಡೆಸಿ ಮುಂದಿನ ನಡೆಯ ಬಗ್ಗೆ ಈಗಾಗಲೇ ಚರ್ಚಿಸಿದ್ದಾರೆ ಎನ್ನಲಾಗಿದೆ.

Edited By

Manjula M

Reported By

Manjula M

Comments