ಹೈಕಮಾಂಡ್ ನಿಂದ ಡಿಕೆಶಿಗೆ ಸಿಕ್ಕಿತ್ತು ಬಂಪರ್ ಗಿಫ್ಟ್: ಕೊನೆಗೂ ಫಿಕ್ಸ್ ಆಯ್ತು ಈ ಖಾತೆ..!

05 Jun 2018 9:43 AM | Politics
51276 Report

ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಖಾತೆ ಹಂಚಿಕೆ ವೇಳೆಯಲ್ಲಿ ಸಾಕಷ್ಟು ಗೊಂದಲಗಳು ಇದಿದ್ದು ನಿಮಗೆಲ್ಲಾ ಗೊತ್ತೆ ಇದೆ. ಇಂಧನ ಖಾತೆ ಜೆಡಿಎಸ್ ತೆಕ್ಕೆಕ್ಕೆ ಬಿದ್ದಿರುವುದಕ್ಕೆ ಕಾಂಗ್ರೆಸ್ನ ಕನಕಪುರದ ಶಾಸಕ ಡಿ.ಕೆ ಶಿವಕುಮಾರ್ ಅವರಿಗೆ ಅಸಮಾಧಾನವಾಗಿದ್ದೇನೋ ನಿಜ. ಇವೆಲ್ಲದರ ನಡುವೆಯೂ ಇಂಧನ ಖಾತೆಗಾಗಿ ಸಾಕಷ್ಟು ಜಟಾಪಟಿ ನಡೆದಿತ್ತು.

ಎಸ್.. 'ಇಂಧನ ಖಾತೆಯನ್ನು ನಾವ್ಯಾರು ಒತ್ತಾಯಪೂರ್ವಕವಾಗಿ ಮಾಡಿ ಕಾಂಗ್ರೆಸ್​ನಿಂದ ಪಡೆದಿಲ್ಲ. ಅವರು ಆ ಖಾತೆ ಪಡೆದು ಬೇರೆ ಖಾತೆಯನ್ನು ನೀಡಿದರೂ ನಮ್ಮ ಅಭ್ಯಂತರವಿಲ್ಲ' ಎಂದಿದ್ದರು. ಈ ವಿಷಯವಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸ್ಪಷ್ಟನೆಯನ್ನು ನೀಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಇಂಧನ ಖಾತೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗಳ ಕುರಿತಂತೆ ಸೋಮವಾರ ತಡರಾತ್ರಿ ತಮ್ಮ ಮನೆಯಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಮಾತನಾಡಿದ್ದು, ಕಾಂಗ್ರೆಸ್, ಇಂಧನ ಖಾತೆಯನ್ನು ಪಡೆದು ಬೇರೆ ಖಾತೆ ನೀಡುವುದಾದರೆ ನಮ್ಮ ಆಕ್ಷೇಪವಿಲ್ಲ. ಇದನ್ನು ಕಾಂಗ್ರೆಸ್​ನವರಿಗೂ ತಿಳಿಸಿದ್ದೇನೆ. ಅವರು ಮಂಗಳವಾರ ರಾಹುಲ್ ಗಾಂಧಿ ಜತೆ ಚರ್ಚೆ ಮಾಡಿ ಹೇಳುವುದಾಗಿ ತಿಳಿಸಿದ್ದಾರೆ ಎಂಬ ಮಾಹಿತಿಗಳು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

 

Edited By

Manjula M

Reported By

Manjula M

Comments