Flash News : ಸಂಪುಟ ರಚನೆಗೆ ಮುನ್ನವೇ ಒಂದು ಪ್ರಭಾವಿ ವಿಕೆಟ್ ಕಳೆದುಕೊಂಡ ‘ಕೈ’ ಪಕ್ಷ..!!

03 Jun 2018 9:59 AM | Politics
7003 Report

ಸಚಿವ ಸಂಪುಟ ವಿಸ್ತರಣೆಗೂ ಮುಂಚೆಯೇ ಕಾಂಗ್ರೆಸ್ ನ ಮೊದಲ ವಿಕೆಟ್ ಪತನಗೊಂಡಿದ್ದು, ಕಾಂಗ್ರೆಸ್ ನ ಹಿರಿಯ ನಾಯಕ ಪದತ್ಯಾಗ ಮಾಡಿದ್ದಾರೆ. ಹೌದು.., ಕಾಂಗ್ರೆಸ್ ನ ಹಿರಿಯ ನಾಯಕರಾದ ಎಸ್.ಆರ್. ಪಾಟೀಲ್ ಕಾಂಗ್ರೆಸ್ ನಾಯಕರ ವರ್ತನೆಗೆ ಬೇಸತ್ತು ರಾಜೀನಾಮೆ ನೀಡಿದ್ದು, ರಾಹುಲ್ ಗಾಂಧಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಇವರು ಕಾಂಗ್ರೆಸ್ ಮೇಲ್ಮನೆ ಸದಸ್ಯರಾಗಿದ್ದು, ಈಗ ರಾಜೀನಾಮೆ ಕೊಟ್ಟು ಹೊಸ ಬಾಂಬ್ ಸಿಡಿಸಿದ್ದಾರೆ.

ಎಸ್.ಆರ್ ಪಾಟೀಲ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭಾವಲಯದಲ್ಲಿದ್ದರು. ಅಷ್ಟೇ ಅಲ್ಲದೇ ಲಿಂಗಾಯತ ಸಮುದಾಯದ ಪ್ರಮುಖ ನಾಯಕ ಮತ್ತು ಕಾಂಗ್ರೆಸ್‍ ನ ಹಿರಿಯ ಮುಖಂಡರಾಗಿದ್ದು ಏಕಾಏಕಿ ರಾಜೀನಾಮೆ ನೀಡಿದ್ದಾರೆ. ಪಾಟೀಲ್ ಅವರು ತನ್ನ ಕಾಂಗ್ರೆಸ್ ನ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ನಲ್ಲಿ ಹಿರಿಯ ನಾಯಕರಿಗೆ ಬೆಲೆ ಇಲ್ಲ. ನಿಷ್ಠಾವಂತ ಮುಖಂಡರಿಗೆ ಕವಡೆ ಕಿಮ್ಮತ್ತಿಲ್ಲ. ಪಕ್ಷದ ನಾಯಕರಿಗೆ ಸಿದ್ದರಾಮಯ್ಯ, ಪರಮೇಶ್ವರ್ ಮಣೆ ಹಾಕುತ್ತಿಲ್ಲ. ಕಾಂಗ್ರೆಸ್ ನೇತಾರರಿಗಿಂತ ಜೆಡಿಎಸ್ ನಾಯಕರೇ ಹೆಚ್ಚು ಆಪ್ಯಾಯಮಾನ ಮಾಡಿದ್ದಾರೆ ಎಂದು ಕೇಂದ್ರ ಹಾಗೂ ರಾಜ್ಯ ನಾಯಕರ ವಿರುದ್ಧ ಎಸ್.ಆರ್. ಪಾಟೀಲ್ ನೇರವಾಗಿ ಆರೋಪ ಮಾಡಿದ್ದಾರೆ.

Edited By

Shruthi G

Reported By

Shruthi G

Comments