ಬಿಜೆಪಿ ಗೆ ಬಿಗ್ ಶಾಕ್ ; ಎಲ್ಲೆಡೆ ಮುದುಡಿದ ಕಮಲ

31 May 2018 5:19 PM | Politics
5982 Report

2019 ರ ಲೋಕಸಭೆಗೆ ದಿಕ್ಸೂಚಿ ಎನ್ನಲಾದ ವಿವಿಧ ರಾಜ್ಯಗಳ 4 ಲೋಕಸಭಾ ಕ್ಷೇತ್ರಗಳು ಮತ್ತು 11 ವಿಧಾನ ಸಭಾ ಕ್ಷೇತ್ರಗಳಿಗೆ ನಡೆದ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.

ನಾಲ್ಕು ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಒಂದು ಗೆದ್ದರೆ, ಇನ್ನೊಂದು ಎನ್.ಡಿ.ಎ ಮಿತ್ರ ಪಕ್ಷ ಎನ್.ಡಿ.ಪಿ.ಪಿ ಗೆದ್ದಿದೆ. ಆರ್‌.ಎಲ್.ಡಿ ಒಂದು ಗೆದ್ದಿದ್ದರೆ, ಎನ್.ಸಿ.ಪಿ ಒಂದು ಕ್ಷೇತ್ರ ಗೆದ್ದುಕೊಂಡಿದೆ. 11 ವಿಧಾನಸನಾ ಕ್ಷೇತ್ರಗಳ ಪೈಕಿ ಒಂದೂ ಕ್ಷೇತ್ರವನ್ನು ಗೆಲ್ಲಲಾಗದೆ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.

ಮಹಾರಾಷ್ಟ್ರ :

ಪಾಲ್ಘರ್ನಲ್ಲಿ ಬಿಜೆಪಿ ಸಂಸದ ಚಿಂತಾಮನ್ ವನಗಾ ಅವರ ಸಾವಿನಿಂದಾಗಿ ಉಪಚುನಾವಣೆ ನಡೆದಿದ್ದು, ಚಿಂತಾಮನ್ ಪುತ್ರ ಶ್ರೀನಿವಾಸ್ ವನಗಾ ಬಿಜೆಪಿ ತೊರೆದು ಶಿವಸೇನೆ ಅಭ್ಯರ್ಥಿಯಾಗಿ ಮುಖಭಂಗ ಅನುಭವಿಸಿದ್ದಾರೆ. ಭಂಡರಾ ಗೊಂಡಿಯಾ ಲೋಕಸಭಾ ಕ್ಷೇತ್ರದಲ್ಲಿ ಎನ್ಸಿಪಿಯ ಕುಕಾಡೆ ಎಂ.ಯಶವಂತ್ ರಾವ್ ಅವರು ಬಿಜೆಪಿ ಅಭ್ಯರ್ಥಿಗಿಂತ ಮುನ್ನಡೆ ಸಾಧಿಸಿದ್ದು, ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ. ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡಂತಾಗಿದೆ.  ಮಹಾರಾಷ್ಟ್ರದ ಪಲೂಸ್ ಕಡೇಗಾಂವ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಕ್ಷೇತ್ರ ಉಳಿಸಿಕೊಂಡಿದೆ.

ಉತ್ತರ ಪ್ರದೇಶ :

ಬಿಜೆಪಿ ಸಂಸದ ಹುಕುಂ ಸಿಂಗ್ ಅವರ ನಿಧನದಿಂದ ತೆರವಾಗಿದ್ದ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆ ಯಲ್ಲಿ ಆರ್‌ಎಲ್ಡಿ ಅಭ್ಯರ್ಥಿ ತಬಸ್ಸಮ್ ಬೇಗಂ ಅವರು ಬಿಜೆಪಿ ಅಭ್ಯರ್ಥಿ ಮೃಗಾಂಕ ಸಿಂಗ್ ಅವರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆರ್‌.ಎಲ್.ಡಿ ಗೆ ಎಸ್.ಪಿ, ಬಿ.ಎಸ್.ಪಿ, ಕಾಂಗ್ರೆಸ್ ಬೆಂಬಲ ಸೂಚಿಸಿದ್ದವು. ಹೀಗಾಗಿ ಗೆಲುವು ಸಾಧಿಸುವುದು ಸುಲಭವಾಯಿತು. ನೂರ್ಪುರ್ ವಿಧಾನಸಭಾ ಕ್ಷೇತ್ರವನ್ನೂ ಆಡಳಿತಾರೂಢ ಬಿಜೆಪಿ ಕಳೆದುಕೊಂಡಿದ್ದು ,ಎಸ್.ಪಿ ಅಭ್ಯರ್ಥಿ ನಯೀಮ್ ಉಲ್ ಹಸನ್ ಜಯ ಭೇರಿ ಬಾರಿಸಿದ್ದಾರೆ.

ಬಿಹಾರ  :
ಜೊಕಿಹತ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜೆಡಿಯು ಗೆದ್ದಿದ್ದ ಸ್ಥಾನವನ್ನು ವಿಪಕ್ಷ ಆರ್ಜೆಡಿ ಗೆಲ್ಲುವ ಮೂಲಕ ಆಡಳಿತಾರೂಢ ಬಿಜೆಪಿ-ಜೆಡಿಯು ಮೈತ್ರಿಕೂಟಕ್ಕೆ ಅಘಾತ ನೀಡಿದ್ದಾರೆ.

ನಾಗಾಲ್ಯಾಂಡ್  :

ನಾಗಾಲ್ಯಾಂಡ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮಿತ್ರ ಪಕ್ಷ ಎನ್.ಡಿ.ಪಿ.ಪಿ ಗೆಲುವು ಸಾಧಿಸಿದೆ.

ಪಂಜಾಬ್  :

ವಿಪಕ್ಷ ಶಿರೋಮಣಿ ಆಕಾಲಿದಳ ಗೆದ್ದಿದ್ದ ಶಾಕೋಟ್ ವಿಧಾನಸಭಾ ಕ್ಷೇತ್ರವನ್ನು ಆಡಳಿತಾರೂಢ ಕಾಂಗ್ರೆಸ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಪಶ್ಚಿಮ ಬಂಗಾಲ:

ಪಶ್ಚಿಮ ಬಂಗಾಲದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಉತ್ತರಾಖಂಡ :

ಥರಾಲಿ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಬಿಜೆಪಿ ಸೋಲು ಅನುಭವಿದೆ. ಕ್ಷೇತ್ರ ಉಳಿಸಿಕೊಳ್ಳುವುಲ್ಲಿ ಬಿಜೆಪಿ ವಿಫಲವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ.

ಮೇಘಾಲಯ :

ಅಂಪಾಟಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದಾರೆ.

ಕೇರಳ  :

ಚಂಗನೂರು ವಿಧಾನಸಭಾ ಕ್ಷೇತ್ರವನ್ನು ಆಡಳಿತಾರೂಢ ಸಿಪಿಎಂ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Edited By

Shruthi G

Reported By

Shruthi G

Comments