ವಿಧಾನಪರಿಷತ್ ಗೆ ಅವಿರೋಧವಾಗಿ 11 ಮಂದಿ ಆಯ್ಕೆ..! ಲೀಸ್ಟ್ ನಲ್ಲಿ ಯಾರೆಲ್ಲಾ ಫೈನಲ್ ಆಗಿದ್ದಾರೆ ಗೊತ್ತಾ?

31 May 2018 11:31 AM | Politics
9950 Report

ಜೂನ್.11 ರಂದು ನಡೆಯುವ ಚುನಾವಣೆಗೆ ಮೂರು ಪಕ್ಷಗಳಿಂದ 11 ಮಂದಿ ಕಣದಲ್ಲಿದ್ದು ಎಲ್ಲರೂ ಅವಿರೋಧ ಆಯ್ಕೆಯಾಗುವುದು ಖಚಿತವಾಗಿದೆ. ವಿಧಾನಪರಿಷತ್ ಚುನಾವಣೆ ಹಿನ್ನಲೆ ಬಿಜೆಪಿಗೆ 5, ಕಾಂಗ್ರೆಸ್ 4 ಹಾಗೂ ಜೆಡಿಎಸ್ 2 ಸ್ಥಾನಗಳನ್ನು ಪಡೆದುಕೊಳ್ಳಲು ಸಾಧ್ಯವಿದ್ದು, ಬಹುತೇಕ ಅವಿರೋಧ ಆಯ್ಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ದೇವೇಗೌಡರ ಪರಮಾಪ್ತರಾಗಿರುವ ವೈ.ಎಸ್.ವಿ. ದತ್ತಾಗೆ ಜೆಡಿಎಸ್'ನಿಂದ ಈ ಬಾರಿ ವಿಧಾನ ಪರಿಷತ್ ಸ್ಥಾನ ತಪ್ಪಿದೆ. ಮಂಗಳೂರಿನ ಉದ್ಯಮಿ ಬಿ.ಎಂ.ಫಾರೂಕ್ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ.ಎಸ್.ಸುಬ್ರಹ್ಮಣ್ಯ ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಅಂದು ಸಂಜೆ 5 ಗಂಟೆಗೆ ಚುನಾವಣಾಧಿಕಾರಿಗಳು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಮೂಲಗಳಿಂದ ತಿಳಿದುಬಂದಿದೆ.

ಮೂರು ಪಕ್ಷದ ಅಭ್ಯರ್ಥಿಗಳ ಪಟ್ಟಿ :
ಬಿಜೆಪಿ: ರಘುನಾಥ್ ರಾವ್ ಮಲ್ಕಾಪುರೆ, ಎನ್.ರವಿಕುಮಾರ್, ಎಸ್. ರುದ್ರೇಗೌಡ, ಕೆ.ಪಿ.ನಂಜುಂಡಿ, ತೇಜಸ್ವಿನಿ ಗೌಡ.
ಕಾಂಗ್ರೆಸ್: ಸಿ.ಎಂ.ಇಬ್ರಾಹಿಂ, ಕೆ.ಗೋವಿಂದರಾಜ್, ಅರವಿಂದ ಕುಮಾರ್ ಅರಳಿ, ಕೆ.ಹರೀಶ್ ಕುಮಾರ್.
ಜೆಡಿಎಸ್: ಬಿ.ಎಂ.ಫಾರೂಕ್,ಡಾ.ಎಸ್.ಸುಬ್ರಹ್ಮಣ್ಯ.

Edited By

Shruthi G

Reported By

Shruthi G

Comments