ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

30 May 2018 5:54 PM | Politics
593 Report

ವಿಧಾನಸಭಾ ಚುನಾವಣೆ ಮುಗಿದ ಬೆನ್ನಲೆ ವಿಧಾನಪರಿಷತ್ ನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್, ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಿದೆ.

ಸಿ.ಎಮ್. ಇಬ್ರಾಹಿಂ, ಗೋವಿಂದರಾಜು, ಕೆ. ಹರೀಶ್ ಕುಮಾರ್ ಹಾಗೂ ಅರವಿಂದ್ ಕುಮಾರ್ ಎಸ್ ಅರಳಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ವಿಧಾನಪರಿಷತ್ ನ ಕಣಕ್ಕಿಳಿಯಲಿದ್ದಾರೆ. ಇನ್ನು ಬಿಜೆಪಿಯಲ್ಲಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳ ಬಲು ದೊಡ್ಡ ಪಟ್ಟಿಯೇ ಸಿದ್ದವಾಗಿದ್ದು, ಪ್ರಮುಖ ನಾಯಕರುಗಳ ಮಧ್ಯೆ ತಮ್ಮ ತಮ್ಮ ಬೆಂಬಲಿಗರಿಗೆ ಟಿಕೆಟ್ ಅನ್ನು ಕೊಡಿಸಲು ಪೈಪೋಟಿ ನಡೆದಿದೆ ಎಂದು ಹೇಳಲಾಗುತ್ತಿದೆ.

 

 

Edited By

Manjula M

Reported By

Manjula M

Comments