ಬ್ರೇಕಿಂಗ್ ನ್ಯೂಸ್ : ಸಂಪುಟ ವಿಸ್ತರಣೆ ಗೆ ಮಹೂರ್ತ ಫಿಕ್ಸ್...ಯಾರ್ಯಾರಿಗೆ ಯಾವ ಸ್ಥಾನ ಗೊತ್ತಾ..!?

30 May 2018 5:03 PM | Politics
26310 Report

ಅಂತೂ-ಇಂತೂ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಕಸರತ್ತು ಯಶಸ್ವಿಯಾಗಿದೆ. ಖಾತೆ ಹಂಚಿಕೆ ಸಂಬಂಧ ಕಾಂಗ್ರೆಸ್-ಜೆಡಿಎಸ್ ಉಭಯ ನಾಯಕರ ನಡುವೆ ನಡೆದ ಮಾತುಕತೆ ಫಲಪ್ರದವಾಗಿದ್ದು, ಗುರುವಾರ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನವದೆಹಲಿಯಲ್ಲಿ ಎಐಸಿಸಿ ವರಿಷ್ಠರಾದ ಗುಲಾಮ್ ನಬಿ ಆಜಾದ್, ವೇಣುಗೋಪಾಲ್ ಮುಂತಾದವರನ್ನು ಭೇಟಿ ಮಾಡಿ ನಡೆಸಿದ ಮಾತುಕತೆಯಲ್ಲಿ ಉಭಯ ಪಕ್ಷಗಳ ನಾಯಕರು ಸಹಮತಕ್ಕೆ ಬಂದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಎರಡೂ ಪಕ್ಷಗಳ ನಾಯಕರ ಒಪ್ಪಿಗೆಯಂತೆ ಜೆಡಿಎಸ್ ಪಕ್ಷಕ್ಕೆ ಹಣಕಾಸು ಖಾತೆ, ಲೋಕೋಪಯೋಗಿ, ಕಂದಾಯ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಮುಜರಾಯಿ, ಪಶುಸಂಗೋಪನೆ ಖಾತೆಗಳನ್ನು ವಹಿಸಲು ತೀರ್ಮಾನಿಸಲಾಗಿದೆ. ಅದೇ ರೀತಿ ಕಾಂಗ್ರೆಸ್‍ಗೆ ಇಂಧನ, ನಗರಾಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಅಬಕಾರಿ, ಗಣಿ ಮತ್ತು ಭೂವಿಜ್ಞಾನ, ಉನ್ನತ ಶಿಕ್ಷಣ, ಸಹಕಾರಿ ಖಾತೆಗಳನ್ನು ವಹಿಸಿಕೊಡಲು ನಿರ್ಧರಿಸಲಾಗಿದೆ. ಉಭಯ ಪಕ್ಷಗಳ ನಾಯಕರು ಖಾತೆಗಳ ಹಂಚಿಕೆ ತೀರ್ಮಾನಕ್ಕೆ ಬಂದು ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ. ಗುರುವಾರ ಹೊಸ ಸಂಪುಟ ರಚನೆಯಾಗಲಿದೆ. ಪ್ರಾದೇಶಿಕವಾರು, ಜಾತಿ ಆಧಾರ, ಜೇಷ್ಠತೆ, ಪಕ್ಷ ನಿಷ್ಠೆ ಮುಂತಾದ ಅಂಶಗಳನ್ನು ಪರಿಗಣಿಸಿ ಸಚಿವ ಸ್ಥಾನ ನೀಡಲು ನಿರ್ಧರಿಸಲಾಗಿದೆ.

ಜೆಡಿಎಸ್ ಪಕ್ಷಕ್ಕೆ ಸಿಗುವ ಸಂಭಾವ್ಯ ಖಾತೆಗಳು :

ಹಣಕಾಸು ಇಲಾಖೆ - ಸಿಎಂ ಎಚ್ ಡಿ ಕುಮಾರಸ್ವಾಮಿ,ಡಿಎಪಿಆರ್, ಗುಪ್ತಚರ; ಕಂದಾಯ ಇಲಾಖೆ - ಎಚ್.ವಿಶ್ವನಾಥ್; ಲೋಕೋಪಯೋಗಿ ಇಲಾಖೆ - ಎಚ್ ಡಿ ರೇವಣ್ಣ; ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣ ಇಲಾಖೆ - ಬಸವರಾಜ್ ಹೊರಟ್ಟಿ; ವೈದ್ಯಕೀಯ ಶಿಕ್ಷಣ ಇಲಾಖೆ - ಡಾ.ಕೆ.ಶ್ರೀನಿವಾಸ್ ಮೂರ್ತಿ; ಕೃಷಿ ಖಾತೆ - ಬಂಡೆಪ್ಪ ಕಾಶೆಂಪೂರ್; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ - ಸಿ.ಎಸ್.ಪುಟ್ಟರಾಜು; ಸಹಕಾರ ಇಲಾಖೆ - ಜಿ.ಟಿ.ದೇವೇಗೌಡ.

ಕಾಂಗ್ರೆಸ್ ಪಕ್ಷಕ್ಕೆ ಸಿಗುವ ಸಂಭಾವ್ಯ ಖಾತೆಗಳು :

ಗೃಹ ಇಲಾಖೆ - ಡಿಸಿಎಂ ಡಾ.ಜಿ.ಪರಮೇಶ್ವರ್; ಇಂಧನ ಇಲಾಖೆ - ಡಿ.ಕೆ.ಶಿವಕುಮಾರ್; ಬೃಹತ್ ಕೈಗಾರಿಕೆ ಇಲಾಖೆ - ಆರ್.ವಿ.ದೇಶಪಾಂಡೆ; ಜಲ ಸಂಪನ್ಮೂಲ ಇಲಾಖೆ - ಎಂ.ಬಿ.ಪಾಟೀಲ್ ಅಥವಾ ಎಸ್.ಆರ್.ಪಾಟೀಲ್; ಬೆಂಗಳೂರು ಅಭಿವೃದ್ಧಿ ಹಾಗೂ ನಗರಾಭಿವೃದ್ಧಿ ಖಾತೆ - ಕೆ.ಜೆ.ಜಾರ್ಜ್; ಉನ್ನತ ಶಿಕ್ಷಣ ಇಲಾಖೆ - ಎಚ್.ಕೆ.ಪಾಟೀಲ್ ಅಥವಾ ಡಾ.ಕೆ.ಸುಧಾಕರ್; ಆರೋಗ್ಯ ಖಾತೆ - ಯು.ಟಿ.ಖಾದರ್ ಅಥವಾ ಡಾ.ಕೆ.ಸುಧಾಕರ್; ಸಮಾಜ ಕಲ್ಯಾಣ ಇಲಾಖೆ - ಟಿ.ರಘುಮೂರ್ತಿ; ವಸತಿ ಇಲಾಖೆ - ಎಂ.ಕೃಷ್ಣಪ್ಪ; ಅಬಕಾರಿ ಇಲಾಖೆ - ಸತೀಶ್ ಜಾರಕಿಹೊಳಿ.

Edited By

Shruthi G

Reported By

Shruthi G

Comments