ಬ್ರೇಕಿಂಗ್ : ಕೃಷಿ ಸಾಲದ ಬಗ್ಗೆ ಕುಮಾರಸ್ವಾಮಿಯ ಮಾಸ್ಟರ್ ಥಿಂಕಿಂಗ್..!

30 May 2018 4:45 PM | Politics
6246 Report

ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣೆ ಪ್ರಚಾರದ ವೇಳೆ ಹಾಗೂ ಪ್ರಣಾಳಿಕೆಯಲ್ಲಿ ಅಧಿಕಾರ ನೀಡಿದರೆ ಸರ್ಕಾರ ರಚನೆಯಾದ 24 ಗಂಟೆಯಲ್ಲಿಯೇ ರೈತರ 53 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವುದಾಗಿ ಹೇಳಿದ ಮಾತಿಗೆ ಸಂಬಂಧಪಟ್ಟಂತೆ ರೈತರ ಸಾಲಮನ್ನಾ ಮಾಡಲು ಇನ್ನು 15 ದಿನ ಕಾಲಾಕಾಶ ನೀಡಿ ಎಂದು ಮುಖ್ಯಮಂತ್ರಿ ಎಚ್​. ಡಿ.ಕುಮಾರಸ್ವಾಮಿ ಹೇಳಿದ್ದಾರೆ.  

ವಿಧಾನಸೌಧದದಲ್ಲಿ ರೈತ ಮುಖಂಡರುಗಳೊಂದಿಗೆ ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ಅವರು ಸಾಲಮನ್ನಾ ಖಚಿತ ಆದರೆ 15 ದಿನ ಕಾಯಬೇಕು ಎಂದಿದ್ದಾರೆ. 15 ದಿನಗಳ ಬಳಿಕ ಸರ್ಕಾರದ ರೂಪುರೇಷೆ ಎಲ್ಲವೂ ಪ್ರಕಟವಾಗಲಿದೆ. 2 ಹಂತಗಳಲ್ಲಿ ಯಾರ ಸಾಲಮನ್ನಾ ಮಾಡಬೇಕು ಅನ್ನೋದರ ಬಗ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೊಂದಿಗೆ ಚರ್ಚಿಸಿ ನಿರ್ಧಾರವನ್ನು ಕೈಗೊಳ್ಳಲಾಗಿದೆ ಅಂತ ತಿಳಿಸಿದ್ದಾರೆ. ಇದೇ ಸಮಯದಲ್ಲಿ ರೈತರು ಅಲ್ಲದವರೂ ಕೃಷಿ ಹೆಸರಲ್ಲಿ ಸಾಲ ಮಾಡಿಕೊಂಡಿದ್ದಾರೆ. ಗೊಬ್ಬರದ ಅಂಗಡಿ ಇಟ್ಟುಕೊಂಡು ಕೃಷಿ ಹೆಸರಲ್ಲಿ ಐದಾರು ಕೋಟಿ ಸಾಲ ಪಡೆದಿದ್ದಾರೆ. ಕಾಫಿ ಪ್ಲಾಂಟರ್ ಸಾಲ ತೆಗೆದುಕೊಂಡಿರುತ್ತಾರೆ. ಅದನ್ನೆಲ್ಲ ಹೇಗೆ ಮನ್ನಾ ಮಾಡುವುದು ಎಂಬ ಬಗ್ಗೆ ಚರ್ಚೆಯನ್ನು ನಡೆಸಬೇಕು ಎಂದು ತಿಳಿಸಿದರು.

Edited By

Manjula M

Reported By

Manjula M

Comments