4 ವರ್ಷದ ಅವಧಿಯಲ್ಲಿ ನರೇಂದ್ರ ಮೋದಿಯವರು ಮಾಡಿದ್ದೇನು?

26 May 2018 3:38 PM | Politics
489 Report

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಬಂದು ನಾಲ್ಕು ವರ್ಷಗಳು ಕಳೆದಿವೆ.. ಈ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರ ಸಾಲಿನಲ್ಲಿ ನಿಂತಿದ್ದಾರೆ. ಆದರೆ ದೇಶದೊಳಗೆ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಉದ್ಯೋಗ ಸೃಷ್ಟಿಯನ್ನು ಮಾಡಲು ವಿಫಲರಾಗಿದ್ದಾರೆ ಎಂಬ ಮಾತುಗಳು ಸಾಕಷ್ಟು ಕೇಳಿ ಬರುತ್ತಿವೆ.

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ತೆಗೆದುಕೊಂಡ ಹಲವು ನಿರ್ಧಾರಗಳ ಬಗ್ಗೆ ಸಾಕಷ್ಟು ಪರ ಮತ್ತು ವಿರೋಧಗಳು ಕೇಳಿಬಂದಿವೆ. ಆ ನಿರ್ಧಾರಗಳಲ್ಲಿ ಕೆಲವೊಂದಿಷ್ಟು ನಿರ್ಧಾರಗಳನ್ನು ನಿಮಗೆ ನೆನೆಪು ಮಾಡುತ್ತಿದ್ದೇವೆ.

ನೋಟ್ ಬ್ಯಾನ್:-ಮೊದಲಿಗೆ ಬಂದಿದ್ದೆ ನೋಟು ನಿಷೇಧ. ಈ ದಿಟ್ಟ ನಿರ್ಧಾರದಿಂದ ಪ್ರಧಾನಿ ನರೇಂದ್ರ ಮೋದಿ ಭಾರೀ ಟೀಕೆ ಎದುರಿಸಬೇಕಾಯಿತು. ಇದರಿಂದ ಸ್ವಲ್ಪ ಜನಕ್ಕೆ ಒಳ್ಳೆಯದಾದರೂ ಆ ಸಮಯದಲ್ಲಿ ಮೋದಿ ಅವರ ವಿರುದ್ದ ಕಿಡಿಕಾರಿದವರೆ ಹೆಚ್ಚು.

ಸ್ವಚ್ಛ ಭಾರತ ಅಭಿಯಾನ:-ಹೆಣ್ಣು ಭ್ರೂಣ ಹತ್ಯೆ ತಡೆ ಹಾಗೂ ಲೈಂಗಿಕ ಅಪರಾಧ ತಡೆ ಮತ್ತು ಶೌಚಾಲಯದ ಸ್ವಚ್ಛತೆ ಹೀಗೆ ಸ್ವಚ್ಛ ಭಾರತದ ಕನಸನ್ನು ಹೊಂದಿದ್ದ ಮೋದಿ ಆ ಬಗ್ಗೆ ಸಾಕಷ್ಟು ಕಡೆ ಹೇಳಿಕೊಂಡಿದ್ದಾರೆ.. ಆ ಕನಸನ್ನ ಜಾರಿಗೆ ತಂದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ.

ಮೇಕ್ ಇನ್ ಇಂಡಿಯಾ:-ನಾಲ್ಕು ವರ್ಷದ ಹಿಂದೆ ಪ್ರಾರಂಭವಾದ ಅಭಿಯಾನ ಇದು. ವಿದೇಶಿ ಕಂಪೆನಿಗಳಿಗೆ, "ಭಾರತಕ್ಕೆ ಬನ್ನಿ" ಮತ್ತು ದೇಶವನ್ನು ಉತ್ಪಾದನಾ ಹಬ್ ಆಗಿ ಮಾಡಿ ಎಂದು ಮೋದಿಯವರು ಹೇಳಿದ್ದರು.

ಮನ್ ಕೀ ಬಾತ್:- ಜನರನ್ನು ತಲುಪುವ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಪರಿಣಾಮಕಾರಿಯಾಗಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಅಕ್ಟೋಬರ್ 2014ರಲ್ಲಿ ರೇಡಿಯೋ ಕಾರ್ಯಕ್ರಮ 'ಮನ್ ಕೀ ಬಾತ್' ಪ್ರಾರಂಭ ಮಾಡಿದರು. ಯಾವುದೇ ಟೀಕೆಗಳು ಬಂದರೂ ಮೋದಿ ಅವರ ರೇಡಿಯೋ ಕಾರ್ಯಕ್ರಮವು ಬಹಳ ಜನಪ್ರಿಯವಾದವು.

ಜನ್ ಧನ್ ಯೋಜನೆ:-ಶೂನ್ಯ ಬಾಕಿ ಉಳಿತಾಯ ಖಾತೆ ಎಂಬ ಕಾರಣಕ್ಕೆ ಕೋಟ್ಯಂತರ ಸಂಖ್ಯೆಯಲ್ಲಿ ಸಾಕಷ್ಟು ಬ್ಯಾಂಕ್ ಗಳಲ್ಲಿ ಹೊಸದಾಗಿ ಖಾತೆಗಳನ್ನು ತೆರೆಯಲಾಯಿತು. ನೇರ ನಗದು ವರ್ಗಾವಣೆ ಸೇರಿದಂತೆ ಇನ್ನೂ ಹಲವು ಯೋಜನೆಗಳನ್ನು ಜನರಿಗೆ ತಲುಪಿಸಲು ಇದರಿಂದ ಸಹಕಾರಿಯಾಯಿತು.

 

Edited By

Manjula M

Reported By

Manjula M

Comments