ಮೋದಿ ಸರ್ಕಾರಕ್ಕೆ ಕಾಡ್ತಿದ್ಯಂತೆ ಈ ಭೀತಿ….ನಿದ್ದೆಗೆಡ್ಸಿದ್ರಾ ಕುಮಾರಣ್ಣ..!?

26 May 2018 2:43 PM | Politics
19943 Report

ನಾಲ್ಕು ವರ್ಷ ಪೂರೈಸಿರುವ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ಚುನಾವಣಾ ವರ್ಷಕ್ಕೆ ದಾಪುಗಾಲು ಇಟ್ಟಿದೆ. ಆದರೆ ಸರ್ಕಾರಕ್ಕೆ ಕಳೆದ ಬಾರಿ ಇದ್ದ ಜನಬೆಂಬಲ ಕ್ಷೀಣಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಯೂ ಕುಗ್ಗಿದೆ. ಜನ ನಿರೀಕ್ಷೆ ಮಾಡಿದ ರೀತಿ ಹೇಳಿಕೊಳ್ಳುವಂತಹ ಬದಲಾವಣೆಗಳನ್ನು ಮಾಡುವಲ್ಲಿ ಪ್ರಧಾನಿ ಮೋದಿ ಕೂಡ ವಿಫಲರಾದರು ಎನ್ನುತ್ತಿದ್ದಾರೆ ಚಿಂತಕರು.

ಹತ್ತು ವರ್ಷಗಳ ಯುಪಿಎ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದ ಜನರು ನರೇಂದ್ರ ಮೋದಿ ಭಾಷಣಕ್ಕೆ ಮನಸೋತು ಹೋಗಿದ್ರು. ದೇಶಪ್ರೇಮ, ಮೂಲಭೂತ ಸೌಕರ್ಯ, ಕಪ್ಪು ಹಣ ವಾಪಸ್ ತರುವ ಯೋಜನೆ, ಭರಪೂರ ಉದ್ಯೋಗ ಸೃಷ್ಟಿ, ಭಷ್ಟಚಾರ ಮಾಡಿದವರನ್ನು ಜೈಲಿಗೆ ಕಳುಹಿಸುತ್ತೇನೆ ಎನ್ನುವ ಭಾಷಣ ಹೀಗೆ ಹತ್ತಾರು ಭರವಸೆಗಳನ್ನು ಜನರ ತಲೆಯಲ್ಲಿ ಬಿತ್ತಿದ ಮೋದಿ ಭರ್ಜರಿ ಗೆಲುವು ಸಾಧಿಸಿದರು. ಆದರೆ ಜನರ ನಿರೀಕ್ಷಿತ ಮಟ್ಟದಲ್ಲಿ ಯಾವ ಯೋಜನೆಗಳು ಯಶಸ್ವಿಯಾಗಲಿಲ್ಲ. ಈಗಾಗಲೇ ಚುನಾವಣೆಗೆ ತಯಾರಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮತ್ತೆ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಕುದುರಿಸಲು ಯೋಜನೆ ರೂಪಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆ ಬಳಿಕ ವಿಧಾನಸಭಾ ಚುನಾವಣೆಯನ್ನೂ ಹೀನಾಯವಾಗಿ ಸೋತಿದ್ದ ಎಸ್‌ಪಿ, ಬಿಎಸ್‌ಪಿ ಹೊಂದಾಣಿಕೆ ಅಸ್ತ್ರ ಮಾಡಿಕೊಂಡಿದ್ದು, ಮುಂದಿನ ವರ್ಷ ಎದುರಾಗುವ ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರುದ್ಧ ಪ್ರಯೋಗ ಮಾಡಲಿದ್ದಾರೆ. ಇದು ಕಮಲಪಾಳಯಕ್ಕೆ ನುಂಗಲಾರದ ತುತ್ತಾಗಿದೆ ಎನ್ನಲಾಗಿದೆ. ಎಸ್​ಪಿ-ಬಿಎಸ್​ಪಿ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಗೋರಖ್‌ಪುರ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಸೋಲನ್ನನುಭವಿಸಿತು. 

ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆಗೆ ಬೇಸತ್ತು, ಮಹಾರಾಷ್ಟ್ರದಲ್ಲಿ ಶಿವಸೇನೆ ಮೈತ್ರಿ ಕಡಿದುಕೊಂಡಿದೆ. ಈ ಬಗ್ಗೆ ಮಾತಾಡಿದ ಅಮಿತ್ ಶಾ, ಹಳೆಯ ಮಿತ್ರನನ್ನು ಕಳೆದುಕೊಳ್ಳುವುದಕ್ಕೆ ಬಿಜೆಪಿ ರೆಡಿಯಿಲ್ಲ. ಒಂದು ವೇಳೆ 2019 ರ ಲೋಕಸಭಾ ಚುನಾವಣೆಯಲ್ಲಿ ಶಿವಸೇನೆ ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳದೆ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ನಾವು ಶಿವಸೇನೆ ವಿರುದ್ಧ ಸ್ಪರ್ಧಿಸಬೇಕಾಗುತ್ತದೆ, ಅದು ಅನಿವಾರ್ಯ ಕೂಡ ಎಂದಿದ್ದಾರೆ. ಇನ್ನೂ ಕರ್ನಾಟಕ ಸಿಎಂ ಕುಮಾರಸ್ವಾಮಿ ಪ್ರಮಾಣ ವಚನ ಕಾರ್ಯಕ್ರಮ ಅಮಿತ್ ಶಾ ನಿದ್ದೆಗೆಡಿಸಿದೆ. 2019 ರ ಲೋಕಸಭಾ ಚುನಾವನೆಯಲ್ಲಿ ಎನ್‌ಡಿಎ ವಿರುದ್ಧ ಪ್ರತ್ಯೇಕವಾಗಿ ಸ್ಪರ್ಧಿಸಲು ಸಾಧ್ಯವಾಗದೇ ವಿರೋಧ ಪಕ್ಷಗಳೆಲ್ಲವೂ ಒಟ್ಟಾಗಿವೆ. ಇವುಗಳಲ್ಲಿ ಕಾಂಗ್ರೆಸ್​ ಹೊರತುಪಡಿಸಿ ಪ್ರಾದೇಶಿಕ ಪಕ್ಷಗಳು ಒಂದೊಂದು ರಾಜ್ಯಗಳಿಗೆ ಸೀಮಿತವಾಗಿವೆ. ಇವರಿಂದ ನಮ್ಮನ್ನು ಸೋಲಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಚುನಾವಣಾ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಭಾಷಣ ಶುರು ಮಾಡಲಿದ್ದಾರೆ. ಆದರೆ ಜನರು ಕಳೆದ ಬಾರಿ ಕೊಟ್ಟ ಭರವಸೆಗಳು ಏನಾದವು ಎಂದು ಪ್ರಶ್ನೆ ಮಾಡಿಕೊಂಡು ಮತ ಚಲಾಯಿಸಿದರೆ ಸಂಕಷ್ಟ ಖಚಿತ ಎನ್ನಲಾಗಿದೆ. ಎಲ್ಲಾ ಬಾರಿಯೂ ಜನ ಮಾತಿಗೆ ಮರುಳಾಗುವುದಿಲ್ಲ ಎಂದು ವಿರೋಧ ಪಕ್ಷಗಳು ಈಗಾಗಲೇ ಹೇಳಲು ಶುರು ಮಾಡಿದ್ದಾರೆ. ಒಟ್ಟಾರೆ ಈ ಎಲ್ಲಾ ಬೆಳವಣಿಗೆಯನ್ನು ಕಂಡ ಬಿ ಜೆ ಪಿ ಪಕ್ಷವು ತಲ್ಲಣ್ಣಗೊಂಡಿದೆ ಎನ್ನಲಾಗಿದೆ.

 

Edited By

Shruthi G

Reported By

Shruthi G

Comments