ಆರ್ ಆರ್ ಕ್ಷೇತ್ರ ವಿಧಾನಸಭಾ ಚುನಾವಣಾ ಹಿನ್ನಲೆ- ಬಹಿರಂಗ ಪ್ರಚಾರಕ್ಕೆ ಇಂದು ತೆರೆ

26 May 2018 10:10 AM | Politics
414 Report

ಆರ್ ಆರ್ ನಗರ ಕ್ಷೇತ್ರದ ಚುನಾವಣೆಯ ಬಹಿರಂಗ ಪ್ರಚಾರಕ್ಕೆಇಂದು ತೆರೆ ಬೀಳಲಿದೆ. ತಮ್ಮ ತಮ್ಮ ಅಭ್ಯರ್ಥಿಗಳ ಪರ ಘಟಾನುಘಟಿ ನಾಯಕರು ಇಂದು ಪ್ರಚಾರವನ್ನು ನಡೆಸಲಿದ್ದಾರೆ.  

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಕಾಂಗ್ರೆಸ್ ಕೂಡ ಬೆಂಬಲಿಸುತ್ತಿದೆ. ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಪರ ಇಂದು ದೇವೇಗೌಡ, ಪ್ರಜ್ವಲ್ ರೇವಣ್ಣ ಪ್ರಚಾರವನ್ನು ನಡೆಸಲಿದ್ದಾರೆ. ಬಿಜೆಪಿ ಪರ ಮುನಿರಾಜುಗೌಡ ಕಣದಲ್ಲಿದ್ದು, ಅವರ ಪರ ಬಿಜೆಪಿ ನಾಯಕರು ಇಂದು ಪ್ರಚಾರ ನಡೆಸಲಿದ್ದಾರೆ.

 

Edited By

Manjula M

Reported By

Manjula M

Comments