ಸದನದಲ್ಲಿ ಬಿ.ಎಸ್.ವೈ ಗೆ ಭಾರಿ ಮುಖಭಂಗ...ಬಹುಮತ ಸಾಬೀತಿನ ನಂತರ ನಡೆದ ಮಹತ್ವದ ಬೆಳವಣಿಗೆ..!!

25 May 2018 5:19 PM | Politics
30395 Report

ಸದನದಲ್ಲಿ ಇಂದು ಎಚ್.ಡಿ.ಕುಮಾರಸ್ವಾಮಿ ಅವರು ಬಹುಮತಯಾಚನೆ ಮಾಡುವ ಸಲುವಾಗಿ ಕರೆಯಲಾಗಿದ್ದ ವಿಶೇಷ ವಿಧಾನಸಭಾ ಅಧಿವೇಶನದ ಸಭೆಯ ವೇಳೆಯಲ್ಲಿ ಎಚ್.ಡಿ ಕುಮಾರಸ್ವಾಮಿ ಅವರ ಮತಯಾಚನೆಗೂ ಮುನ್ನ ಬಿ.ಎಸ್.ಯಡಿಯೂರಪ್ಪ ನವರ ನೇತೃತ್ವದಲ್ಲಿ ಬಿಜೆಪಿ ಶಾಸಕರು ಸದನದಿಂದ ಎದ್ದು ಹೊರ ಹೋಗಿದ್ದಾರೆ.

ವಿಶ್ವಾಸಮತಯಾಚನೆ ನಿರ್ಣಯ ಮಂಡನೆ ಮಾಡಿದ ಬಳಿಕ ಮಾತನಾಡಿದ ಕುಮಾರಸ್ವಾಮಿ ಅವರು, 'ರೈತರ ಸಾಲಮನ್ನಾ ಬಗ್ಗೆ ಬಿಜೆಪಿಯಿಂದ ಕಲಿಯಬೇಕಿಲ್ಲ. ಈಗ ಯಡಿಯೂರಪ್ಪ ರೈತರ ಸಾಲಮನ್ನಾ ಬಗ್ಗೆ ಮಾತನಾಡುತ್ತಾರೆ. ಆದರೆ, 2010ರಲ್ಲಿ ಯಡಿಯೂರಪ್ಪ ಅವರು ಸಾಲಮನ್ನಾಕ್ಕೆ ಹಣವಿಲ್ಲ ಎಂದಿದ್ದರು' ಎಂದರು. ಬಹುಮತ ಸಾಬೀತಿನ ನಂತರ ಐಎಎಸ್​ ಮತ್ತು ಐಪಿಎಸ್​ ಅಧಿಕಾರಿಗಳ ವರ್ಗಾವಣೆಯಾಗುವ ಸಾಧ್ಯತೆಯಿದೆ. ಕಾಂಗ್ರೆಸ್​ ಮತ್ತು ಜೆಡಿಎಸ್​ ಎರಡೂ ಪಕ್ಷದ ವರಿಷ್ಠರ ಚರ್ಚೆಯ ನಂತರ ಕುಮಾರಸ್ವಾಮಿ ವರ್ಗಾವಣೆ ಆದೇಶ ನೀಡಲಿದ್ದಾರೆ ಎಂಬ ಮಾಹಿತಿ ಗೃಹ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.

ಬಿ.ಎಸ್​. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಕೇವಲ ಮೂರು ದಿನಗಳ ಕಾಲ ಅಧಿಕಾರದಲ್ಲಿದ್ದರು. ಆದರೆ ಅಷ್ಟು ಚಿಕ್ಕ ಅವಧಿಯಲ್ಲೇ ಐಎಎಸ್​ ಮತ್ತು ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್​ ಬಹುಮತ ಸಾಬೀತಾಗುವ ವರೆಗೂ ಬಿಎಸ್​ವೈ ಮಾಡಿದ ವರ್ಗಾವಣೆಗಳನ್ನು ಅಸಿಂಧು ಎಂದು ಆದೇಶಿಸಿತ್ತು. ನಂತರ ಯಡಿಯೂರಪ್ಪ ವಿಶ್ವಾಸ ಮತ ಯಾಚಿಸದೆ ರಾಜೀನಾಮೆ ನೀಡಿದ್ದರು. ಈಗ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಕುಮಾರಸ್ವಾಮಿಯವರು ಬೇರೆ ಅಧಿಕಾರಿಗಳನ್ನು ಆಯಕಟ್ಟಿನ ಜಾಗಗಳಲ್ಲಿ ತರಲು ಚಿಂತಿಸಿದ್ದಾರೆ. ಗೃಹ ಇಲಾಖೆಯ ಉನ್ನತ ಮೂಲಗಳು ಮಾಹಿತಿಯ ಪ್ರಕಾರ ಗುಪ್ತಚರ ಇಲಾಖೆಯ ಡಿಜಿಪಿಯಾಗಿರುವ ಆಶಿತ್​ ಮೋಹನ್​ ಪ್ರಸಾದ್​ರ ಜಾಗಕ್ಕೆ ಒಕ್ಕಲಿಗ ಅಧಿಕಾರಿ ಕಿಶೋರ್ ಚಂದ್ರರನ್ನು ನೇಮಿಸುವ ಇಚ್ಚೆ ಕುಮಾರಸ್ವಾಮಿ ಹೊಂದಿದ್ದಾರೆ. ಈ ಹಿಂದೆ 2006ರಲ್ಲಿ ಮುಖ್ಯಮಂತ್ರಿಯಾದಾಗಲೂ ಕಿಶೋರ್​ ಚಂದ್ರರನ್ನು ಕುಮಾರಸ್ವಾಮಿ ಗುಪ್ತಚರ ಇಲಾಖೆಯ ಡಿಜಿಪಿ ಹುದ್ದೆಗೆ ನೇಮಕ ಮಾಡಿದ್ದರು. ಸರ್ಕಾರದ ಸುತ್ತ ನಡೆಯುತ್ತಿರುವ ಆಗುಹೋಗುಗಳನ್ನು ತಿಳಿದುಕೊಳ್ಳಲು ಗುಪ್ತಚರ ಇಲಾಖೆಯ ಬಹುಮುಖ್ಯ ಇಲಾಖೆಯಾಗಿದೆ.

ಗುಪ್ತಚರ ಇಲಾಖೆಯ ಡಿಜಿಪಿ ಬದಲಾವಣೆಯ ಜತೆಗೆ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾದ ತುಶಾರ್​ ಗಿರಿನಾಥ್​, ಎಲ್​. ಕೆ. ಅಥೀಕ್​, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್​ ಗೋಯೆಲ್​ರನ್ನು ಕೂಡ ವರ್ಗಾವಣೆ ಮಾಡುವ ಸಾಧ್ಯತೆಯಿದೆ. ಆದರೆ ಇವರ ಜಾಗಕ್ಕೆ ಯಾವ ಅಧಿಕಾರಿಗಳನ್ನು ತರಲಿದ್ದಾರೆ ಎಂಬುದು ಇನ್ನು ತಿಳಿದಿಲ್ಲ. ಬೆಂಗಳೂರು ಕೆಲ ಡಿಸಿಪಿಗಳನ್ನೂ ವರ್ಗಾವಣೆ ಮಾಡುವ ಸಾಧ್ಯತೆಯಿದೆ. ಬೆಂಗಳೂರು ಪೊಲೀಸ್​ ಆಯುಕ್ತರಾಗಿ ಟಿ. ಸುನೀಲ್​ ಕುಮಾರ್​ ಅವರೇ ಮುಂದುವರೆಯಲಿದ್ದು, ಹೆಚ್ಚುವರಿ ಆಯುಕ್ತರ ಬದಲಾವಣೆಯಾಗುವ ಸಾಧ್ಯತೆಯಿದೆ  ಎಂದು ಮೂಲಗಳಿಂದ ತಿಳಿದು ಬಂದಿದೆ.

Edited By

Shruthi G

Reported By

Shruthi G

Comments