ವಿಶ್ವಾಸಮತಯಾಚನೆಯಲ್ಲಿ ವಿಶ್ವಾಸ ಗಳಿಸಿದ  ಸಿಎಂ ಎಚ್’ಡಿಕೆ

25 May 2018 4:09 PM | Politics
578 Report

ಕರ್ನಾಟಕ ರಾಜ್ಯದ ನೂತನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿರುವ ಹೆಚ್.ಡಿ.ಕೆ ಅವರು ವಿಧಾನಸಭೆಯಲ್ಲಿ ಇಂದು ಬಹುಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.  

ನೀವು ರೈತರ ಸಾಲಮನ್ನಾ ವನ್ನು ಮಾಡದೇ ಹೋದರೆ ಇದೇ ಸೋಮವಾರ ಇಡೀ ರಾಜ್ಯಾದ್ಯಂತ ಸ್ವಯಂ ಘೋಷಿತ ಬಂದ್​ ಆಗಲಿದೆ ಅಂತ ಹೇಳಿದ ಯಡಿಯೂರಪ್ಪ ವಿಶ್ವಾಸಮತ ಸಾಬೀತು ಪಡಿಸುವ ಪ್ರಕ್ರಿಯೆಗೆ ನಮ್ಮದೇನು ಅಭ್ಯಂತರವಿಲ್ಲ ಎಂದು ಹೇಳಿ ಸಭಾತ್ಯಾಗ ಮಾಡಿ ಸದನದಿಂದ ಬಿಎಸ್ ಯಡಿಯೂರಪ್ಪ ಹೊರ ನಡೆದರು. ಇದೇ ಸಮಯದಲ್ಲಿ ನೂತನ ಸ್ಪೀಕರ್ ಅವರು ಹೆಚ್.ಡಿ ಕುಮಾರ್ ಸ್ವಾಮಿ ಅವರ ಸದನದಲ್ಲಿ ಸಲ್ಲಿಸಿದ ಪ್ರಸ್ತಾವನೆಯ ಬಗ್ಗೆ ಸದನದಲ್ಲಿ ಶಾಸಕರನ್ನು ಕೇಳಿಕೊಂಡ ವೇಳೆಯಲ್ಲಿ ಕುಮಾರಸ್ವಾಮಿಯವರ ಪರವಾಗಿ, ಒಟ್ಟು 117 ಶಾಸಕರು ಹೌದು, ಅಂತ ಹೇಳುವುದರ ಮೂಲಕ ಹೆಚ್.ಡಿ.ಕೆ ಅವರು ಸದನದಲ್ಲಿ ಮಂಡಿಸಿದ್ದ ಬಹುಮತಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದರು.

                                                                         

Edited By

Manjula M

Reported By

Manjula M

Comments

Cancel
Done