ಶಾಂತಿಯುತ ಚುನಾವಣೆಗೆ ಆರ್‌ ಆರ್‌ ನಗರದಲ್ಲಿ ಸಕಲ ಸಿದ್ಧತೆ..!

24 May 2018 11:58 AM | Politics
351 Report

ರಾಜ್ಯವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಚುನಾವಣೆ ಮೇ 28 ಸೋಮವಾರದಂದು ನಡೆಯುವುದರಿಂದ ಅನೇಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಒಟ್ಟು 421 ಮತಗಟ್ಟೆಗಳ ಪೈಕಿ 4 ಕಷ್ಟಕರ, 47 ಅತಿಸೂಕ್ಷ್ಮ ಮತ್ತು 186 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ವಶಕ್ಕೆ ಪಡೆಯಲಾಗಿದ್ದ ಚುನಾವಣಾ ಗುರುತಿನ ಚೀಟಿಗಳನ್ನು ಸಂಬಂಧಪಟ್ಟ ಮತದಾರರಿಗೆ ಹಿಂದಿರುಗಿಸಲಾಗುತ್ತದೆ. ಮತದಾರರು ಅಥವಾ ಸಂಬಂಧಿಗಳೇ ನಾಪತ್ತೆ ಕುರಿತು ಸ್ವತಃ ಹೇಳಿಕೆಯನ್ನು ಬರೆದುಕೊಟ್ಟು ಸಹಿಯನ್ನು ಮಾಡಬೇಕು, ಅಗತ್ಯ ಬಿದ್ದರೆ ಈ ದಾಖಲೆಯನ್ನು ಚಿತ್ರೀಕರಣ ಕೂಡ ಮಾಡಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಟಿ. ಸುನೀಲ್ ಕುಮಾರ್ ಹೇಳಿದ್ದಾರೆ.

 

 

Edited By

Manjula M

Reported By

Manjula M

Comments