A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

'ಕೈ' ನ ಕೈ ಹಿಡಿದ ಆಪದ್ಬಾಂಧವನಿಗೆ ಹೈಕಮಾಂಡ್ ಕೊಡಲಿದ್ಯಾ ಭರ್ಜರಿ ಗಿಫ್ಟ್..!? | Civic News

'ಕೈ' ನ ಕೈ ಹಿಡಿದ ಆಪದ್ಬಾಂಧವನಿಗೆ ಹೈಕಮಾಂಡ್ ಕೊಡಲಿದ್ಯಾ ಭರ್ಜರಿ ಗಿಫ್ಟ್..!?

23 May 2018 1:00 PM | Politics
5662 Report

ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆ ಎಲ್ಲರಲ್ಲೂ ಭಾರೀ ಕುತೂಹಲ ಮೂಡಿಸಿದ್ದು, ಯಾರಿಗೂ ಬಹುಮತ ಬರದ ಹಿನ್ನಲೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ನಡೆಸಲು ಮುಂದಾಗಿದ್ದಾರೆ. ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರು ಪ್ರಮಾಣವಚನ ಸ್ವೀಕರಿಸಲು ಭರ್ಜರಿ ಸಿದ್ದತೆಗಳು ನಡೆಯುತ್ತಿದ್ದೆ.

ಮೇ 15 ರಂದು ಹೊರಬಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಚಿತ್ರಣವನ್ನೇ ಬದಲಾಯಿಸಿದವರು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್. ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ(104)ಗೆ ಮ್ಯಾಜಿಕ್ ನಂಬರ್ ಗೆ ಅಗತ್ಯವಿದ್ದ 12 ಸ್ಥಾನಗಳನ್ನು ಪಡೆಯುವುದಕ್ಕೆ ಸಾಧ್ಯವೇ ಆಗದಂತೆ ಕಾಂಗ್ರೆಸ್-ಜೆಡಿಎಸ್ ನಾಯಕರನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದವರು ಡಿಕೆಶಿ. ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ.ಶಿವಕುಮಾರ್ ಅಂದ್ರೆ ಆಪದ್ಬಾಂಧವ. ಅಷ್ಟೇ ಅಲ್ಲದೆ, ಸದ್ಯದ ಪರಿಸ್ಥಿತಿಯಲ್ಲಿ ಡಿಕೆಶಿ ಇಲ್ಲದ ಕರ್ನಾಟಕ ಕಾಂಗ್ರೆಸ್ ಅನ್ನು ಊಹಿಸುವುದಕ್ಕೂ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಡಿ.ಕೆ.ಶಿವಕುಮಾರ್ ಗೆ ಹೈಕಮಾಂಡ್ ಭರ್ಜರಿ ಗಿಫ್ಟ್ ನೀಡಲು ಸಕಲ ಸಿದ್ಧತೆ ನಡೆಸಿದೆಯಾ? ಕಾಂಗ್ರೆಸ್ ಹೈಕಮಾಂಡ್ ಭರ್ಜರಿ ಗಿಫ್ಟ್ ನೀಡಲು ಎಲ್ಲಾ ಸಿದ್ಧತೆ ನಡೆಸಿದೆ. ಅಷ್ಟಕ್ಕೂ ಏನಿದು ಗಿಫ್ಟ್?...

ಗುಜರಾತ್ ರಾಜ್ಯ ಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ಸೆಡ್ಡು ಹೊಡೆದು ನಿಂತ ಗಟ್ಟಿಗ ಡಿಕೆಶಿ, ಇದೀಗ ಕರ್ನಾಟಕ ಚುನಾವಣೆಯ ನಂತರವೂ ಕಾಂಗ್ರೆಸ್, ಜೆಡಿಎಸ್ ಶಾಸಕರ್ಯಾರೂ ಕದಲದಂತೆ ರೆಸಾರ್ಟ್ ನಲ್ಲೇ ದಿಗ್ಬಂಧನ ಹಾಕಿದ್ದು ಡಿ.ಕೆ.ಶಿವಕುಮಾರ್. ಕರ್ನಾಟಕದ ರಾಜಕಾರಣದಲ್ಲಿ ಬಹಳ ಪ್ರಮುಖ ಸ್ಥಾನ ವಹಿಸಿದ ದೊಡ್ಡನಹಳ್ಳಿ ಕೆಂಪೇಗೌಡ ಶಿವಕುಮಾರ್ ಅಲಿಯಾಸ್ ಡಿ.ಕೆ.ಶಿವಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯನ್ನು(ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ-ಕೆಪಿಸಿಸಿ) ನೀಡುವ ಕುರಿತು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸುತ್ತಿದೆ. ಎಲ್ಲಾ ನಾಯಕರನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ಏಕೈಕ ನಾಯಕ ಅಂದ್ರೆ ಅದು ಡಿ.ಕೆ.ಶಿವಕುಮಾರ್. ತಮ್ಮ ಸಾಮಾರ್ಥ್ಯ ರಾಜ್ಯದ ಗಡಿ ದಾಟಿಯೂ ವ್ಯಾಪಿಸಿದೆ ಎಂಬುದನ್ನು ಗುಜರಾತ್ ರಾಜ್ಯಸಭಾ ಚುನಾವಣೆಯ ಸಮಯದಲ್ಲೇ 56 ವರ್ಷದ ಡಿ.ಕೆ.ಶಿವಕುಮಾರ್ ಅವರು ತೋರಿಸಿಕೊಟ್ಟಿದ್ದರು. ಆದ್ದರಿಂದ ಈ ಹುದ್ದೆಗೆ ಡಿ.ಕೆ.ಶಿವಕುಮಾರ್ ಅವರನ್ನೇ ಆರಿಸಲು ಹೈಕಮಾಂಡ್ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ನಾಪತ್ತೆಯಾಗಿದ್ದ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ಮತ್ತು ಆನಂದ್ ಸಿಂಗ್ ಅವರನ್ನು ವಿಧಾನಸೌಧದೆದುರು ಕೊನೇ ಕ್ಷಣದ ವರೆಗೂ ಕಾದು, 'ವಿಪ್' ಪತ್ರವನ್ನು ಅವರ ಜೇಬಿಗೆ ತುರುಕಿದವರು ಇದೇ ಡಿಕೆಶಿ! ಹೀಗೇ ಕಾಂಗ್ರೆಸ್ ಪಾಲಿಗೆ ಆಪದ್ಬಾಂಧವ ಎಂದೆನ್ನಿಸಿರುವ ಡಿಕೆಶಿಯವರಿಗೆ ಕಾಂಗ್ರೆಸ್ ಕೆಪಿಸಿ ಅಧ್ಯಕ್ಷ ಹುದ್ದೆ ಮತ್ತು ಅವರಿಷ್ಟಪಟ್ಟ ಮಂತ್ರಿ ಪದವಿ ಎರಡನ್ನೂ ನೀಡಲು ಚಿಂತನೆ ನಡೆಸಿದ್ದು, ಅವರಿಗೆ ಸದ್ಯದಲ್ಲೇ ಈ ಎರಡು ಗಿಫ್ಟ್ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

 

Edited By

Shruthi G

Reported By

Shruthi G

Comments