ರೆಸಾರ್ಟ್‌ನಲ್ಲಿ ಜೆಡಿಎಸ್ ಸದಸ್ಯರಿಗೆ ಬಿಗಿ ಸರ್ಪಗಾವಲು

21 May 2018 1:52 PM | Politics
511 Report

ಬೆಂಗಳೂರು: ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕ್ಷಣ ಹತ್ತಿರ ಬರುತ್ತಿದ್ದಂತೆಯೇ ಜೆಡಿಎಸ್‌ನ ಶಾಸಕರನ್ನು ಮತ್ತೆ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ. ಇನ್ನೂ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯದ ಕಾರಣ, ಈ ಅವಧಿಯಲ್ಲಿ ಬಿಜೆಪಿಯು ತನ್ನ ಶಾಸಕರನ್ನು ಸೆಳೆದುಕೊಳ್ಳಬಹುದು ಎಂಬ ಗಾಬರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್, ಗುರುವಾರ ನಡೆಯಲಿರುವ ವಿಶ್ವಾಸಮತ ಪ್ರಕ್ರಿಯೆಯವರೆಗೂ ಶಾಸಕರನ್ನು ಬೇರೆಯವರೊಂದಿಗೆ ಸಂಪರ್ಕ ಹೊಂದದಂತೆ ಮಾಡುವ ಪ್ರಯತ್ನ ನಡೆಸಿದೆ.

ದೇವನಹಳ್ಳಿಯ ನಂದಿಬೆಟ್ಟದ ಸಮೀಪದಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್‌ಗೆ ಭಾನುವಾರ ರಾತ್ರಿಯೇ ಶಾಸಕರನ್ನು ಕರೆದೊಯ್ಯಲಾಗಿದೆ. ಒಟ್ಟು 30 ರೂಮ್‌ಗಳನ್ನು ಶಾಸಕರಿಗಾಗಿ ಬುಕ್ ಮಾಡಿದ್ದಾರೆ ಮಾಡಿದ್ದಾರೆ. ಶಾಸಕರ ಕುಟುಂಬದ ಸದಸ್ಯರೂ ಕೂಡ ಅವರನ್ನು ಸೇರಿಕೊಳ್ಳುತ್ತಾರೆ ಎಂದು ವರ್ತಮಾನ ಬಂದಿದೆ. ರೆಸಾರ್ಟ್ ಸುತ್ತಲೂ ಬಿಗಿ ಸರ್ಪಗಾವಲು ಕಲ್ಪಿಸಲಾಗಿದ್ದು, ಬೆಂಬಲಿಗರು ಮತ್ತು ಶಾಸಕರ ಆಪ್ತರು ಸೇರಿದಂತೆ ಹೊರಗಿನಿಂದ ಬರುತ್ತಿರುವ ಯಾವ ವಕ್ತಿಗೂ ಒಳಗೆ ಪ್ರವೇಶ ನೀಡುತ್ತಿಲ್ಲ. ಕುಮಾರಸ್ವಾಮಿಯವರು ಕಾರ್ಯಕ್ರಮ ಬದಲು ಸೋಮವಾರ ಬೆಳಿಗ್ಗೆ ಹಾಸನದ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಅಲ್ಲಿಂದ ನೇರವಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಭೇಟಿಗೆ ದೆಹಲಿಗೆ ತೆರಳುವ ಕಾರ್ಯಕ್ರಮವಿತ್ತು.

ಅದರಲ್ಲಿ ಬದಲಾವಣೆ ಮಾಡಲಾಗಿದ್ದು, ತವರಿನಲ್ಲಿ ಪೂಜೆ ಸಲ್ಲಿಸಿದ ಮೇಲೆ ನಂದಿಬೆಟ್ಟದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಜೆಡಿಎಸ್ ಶಾಸಕರನ್ನು ಭೇಟಿ ಮಾಡಿ ಸಮಾಲೋಚನೆ ನೆಡೆಸುತ್ತಾರೆ ಎನ್ನಲಾಗಿದೆ. ಕುಮಾರಸ್ವಾಮಿ ಅವರು ಬೆಳಿಗ್ಗೆ 11 ಗಂಟೆಗೆ ರೆಸಾರ್ಟ್‌ಗೆ ತೆರಳಲಿದ್ದಾರೆ. ರೆಸಾರ್ಟ್ನಲ್ಲಿ ಸಭೆ ನಡೆಸಿದ ಬಳಿಕ ನೇರವಾಗಿ ದೆಹಲಿಗೆ ಪ್ರಯಾಣಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್‌ನ ಶಾಸಕರನ್ನು ಕೂಡ ಹೋಟೆಲ್‌ನಲ್ಲಿಯೇ ಇರಿಸಿದ್ದು, ಗುರುವಾರದವರೆಗೂ ಸದಸ್ಯರೆಲ್ಲರೂ ಅಲ್ಲಿಯೇ ಠಿಕಾಣಿ ಹೂಡುವ ಸಾಧ್ಯತೆ ಇದೆ. ಬೆಂಗಳೂರಿನ ಹಿಲ್ಟನ್ ಹೋಟೆಲ್‌ನಲ್ಲಿ ಕಾಂಗ್ರೆಸ್‌ನ ಶಾಸಕರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಹೋಟೆಲ್‌ಗೆ ಬರುವ ಪ್ರತಿ ವಾಹನವನ್ನೂ ತಪಾಸಣೆ ನಡೆಸಲಾಗುತ್ತಿದೆ.

Edited By

Aruna r

Reported By

Aruna r

Comments