ಬಿ.ಎಸ್.ವೈ ಗೆ ಶಾಕ್; ಸುಪ್ರೀಂ ಕೊರ್ಟ್ ತೀರ್ಪಿನ ಕಂಪ್ಲೀಟ್ ಡೀಟೇಲ್ಸ್..!!

18 May 2018 1:02 PM | Politics
5218 Report

ಬಹುಮತವಿಲ್ಲದೆ ಸರಕಾರ ರಚನೆಗೆ ರಾಜ್ಯಪಾಲರು ಬಿಜೆಪಿಯನ್ನು ಆಹ್ವಾನಿಸಿದ್ದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೊರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ನಾಳೆಯೇ ವಿಶ್ವಾಸ ಮತಯಾಚನೆ ಮಾಡಬೇಕು, ನಾಳೆ ಸಂಜೆ 4 ಗಂಟೆಗೆ ವಿಶ್ವಾಸ ಮತಯಾಚನೆ ಮಾಡಬೇಕು ಎಂದು ಬಿಜೆಪಿಗೆ ಸುಪ್ರೀಂ ಕೊರ್ಟ್ ಸೂಚಿಸಿದೆ.

ಮೊದಲು ಅರ್ಜಿದಾರರಿಗೆ ಎರಡು ಆಯ್ಕೆ ನೀಡಿದ ಸುಪ್ರೀಂ ಕೋರ್ಟ್ ರಾಜ್ಯಪಾಲರ ನಿರ್ಣಯದ ಬಗ್ಗೆ ವಿಸ್ಕೃತ ವಿಚಾರಣೆ ಬೇಕೆ ಅಥವಾ ನಾಳೆಯೇ ವಿಶ್ವಾಸಮತ ಆದೇಶ ನೀಡಬೇಕೆ ಎಂದು ಕೋರ್ಟ್ ಅರ್ಜಿದಾರರಿಗೆ ಆಯ್ಕೆ ನೀಡಿತ್ತು. ನಂತರದ ವಾದದ ಬಳಿಕ ಸುಪ್ರೀಂ ಮೂವರು ನ್ಯಾಯಮೂರ್ತಿಗಳು ನಾಳೆ ಬಿಜೆಪಿ ವಿಶ್ವಾಸಮತ ಯಾಚನೆಗೆ ಪೀಠ ಆದೇಶ ಹೊರಡಿಸಿದೆ. ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎಸ್‌.ಎ. ಬೋಬ್ಡೆ ಹಾಗೂ ಅಶೋಕ್‌ ಭೂಷಣ್‌ ಅವರಿದ್ದ ತ್ರಿಸದಸ್ಯ ಪೀಠ ಆದೇಶವನ್ನು ಹೊರಡಿಸಿತು. ಮೊದಲು ಬಿಜೆಪಿ ಪರ ವಾದ ಮಂಡಿಸಿದ ವಕೀಲ ಮುಕುಲ್ ರೋಹ್ಟಗಿ ಅವರು ನಾಳೆಯೇ ವಿಶ್ವಾಸಮತ ಯಾಚಿಸಲು ವಿರೋಧ ವ್ಯಕ್ತಪಡಿಸಿದರು. ವಿಶ್ವಾಸ ಮತ ಯಾಚನೆ ಗಳಿಸಲು ನಾಳೆ ಸೂಕ್ತ ವ್ಯವಸ್ಥೆಯೊಂದಿಗೆ ಎಲ್ಲ ಶಾಸಕರು ಸದನದಲ್ಲಿ ಹಾಜರಿದ್ದು ಸೂಕ್ತ ಭದ್ರತೆಯನ್ನು ಒದಗಿಸಿ ವಿಶ್ವಾಸ ಮತ ಗಳಿಸಲು ಡಿಜಿಪಿಗೆ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ಹೇಳಿಕೆ ನೀಡಿತು.

ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಬಿ.ಎಸ್. ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವವರೆಗೂ ಯಾವುದೇ ಆಡಳಿತಾತ್ಮಕ ನಿರ್ಧಾರವನ್ನು ತೆಗೆದುಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಇದು ಸುಪ್ರೀಂಕೋರ್ಟ್‌ನ ಐತಿಹಾಸಿಕ ಮಹತ್ವದ ತೀರ್ಪು ಎಂದು ಕಾಂಗ್ರೆಸ್-ಜೆಡಿಎಸ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಪ್ರತಿಕ್ರಿಯಿಸಿದ್ದಾರೆ. ಯಡಿಯೂರಪ್ಪ ಅವರಿಗೆ ಪ್ರಮಾಣವಚನ ಸ್ವೀಕರಿಸಲು ಮತ್ತು ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿದ್ದೆವು. ವಿಧಾನಸಭೆಗೆ ಆಂಗ್ಲೊ ಇಂಡಿಯನ್‌ ಸದಸ್ಯರನ್ನು ನೇಮಕ ಮಾಡುವ ಸಂಬಂಧದ ರಾಜ್ಯಪಾಲರ ನಿರ್ಧಾರಕ್ಕೂ ಸುಪ್ರೀಂಕೋರ್ಟ್ ತಡೆ ನೀಡಿದೆ ಎಂದು ಸಿಂಘ್ವಿ ತಿಳಿಸಿದ್ದಾರೆ. ಎಲ್ಲ ಶಾಸಕರೂ ಪ್ರಮಾಣವಚನ ಸ್ವೀಕರಿಸಬೇಕು. ಬಳಿಕ ಹಂಗಾಮಿ ಸ್ಪೀಕರ್‌ ಅವರನ್ನು ನೇಮಕ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶದಲ್ಲಿ ತಿಳಿಸಿರುವುದಾಗಿ ಸಿಂಘ್ವಿ ಹೇಳಿದ್ದಾರೆ.

Edited By

Shruthi G

Reported By

Shruthi G

Comments