ನೂತನ ಸರ್ಕಾರ ರಚನೆ ಕುರಿತು ಹೊಸ ಬಾಂಬ್ ಸಿಡಿಸಿದ ಡಿ.ಕೆ ಶಿವಕುಮಾರ್

16 May 2018 5:26 PM | Politics
66265 Report

ವಿಧಾನಸಭಾ ಚುನಾವಣೆ ಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವುದಕ್ಕೆ ಯಾವುದೇ ಪಕ್ಷಗಳಿಗೆ ಸರಿಯಾಗಿ ಬಹುಮತ ಬಾರದೇ ಇರುವುದರಿಂದ ಎಲ್ಲಾ ರಾಜಕೀಯ ಪಕ್ಷಗಳು ಅನ್ಯ ಪಕ್ಷದ ಶಾಸಕರುಗಳನ್ನು ತಮ್ಮತ್ತ ಸೆಳೆಯವುದಕ್ಕೆ ಮುಂದಾಗಿದೆ.

ಈ ನಡುವೆ ಬಿಜೆಪಿ ಕೂಡ ಸರ್ಕಾರ ರಚನೆ ಬೇಕಾಗಿರುವ ಕಾಂಗ್ರೆಸ್​ನ ಎಲ್ಲ ಶಾಸಕರಿಗೂ ಬಿಜೆಪಿಯಿಂದ ಕರೆ ಬಂದಿದೆ ಅಂತ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಡಿಕೆಶಿ ಉತ್ತರಿಸಿದ್ದಾರೆ. ಇದೇ ವೇಳೆ ಅವರು ಮಾತನಾಡಿ ಬಿಜೆಪಿ ಕುದುರೆ ವ್ಯಾಪಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು. ಕಾಂಗ್ರೆಸ್​​ನ ಚುನಾಯಿತ ಶಾಸಕರು ಬಿಜೆಪಿ ಕರೆಗೆ ಓಗೊಟ್ಟು ಆ ಪಕ್ಷಕ್ಕೆ ಸೇರಲು ಮತ ಹಾಕಿದ ಜನ ಬಿಡಬೇಕಲ್ಲವೇ? ನಮ್ಮ ಪಕ್ಷದಲ್ಲಿ ಯಾರ್ಯಾರಿಗೆ ಕರೆ ಬಂದಿದೆ ಎಂಬುದರ ಪಟ್ಟಿ ಕೊಡುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ನಮಗೂ ರಾಜಕಾರಣ ಮಾಡಲು ಗೊತ್ತಿದೆ ಅಂತ ಬಿಜೆಪಿ ವಿರುದ್ದ ಹರಿಹಾಯ್ದರು. ಇನ್ನು ಶಾಸಕರನ್ನು ರೆಸಾರ್ಟ್​ಗೆ ಕರೆದೊಯ್ಯಲಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, " ರೆಸಾರ್ಟ್​ ರಾಜಕಾರಣ ನಮ್ಮ ಸಂಸ್ಕೃತಿ ಅಲ್ಲ," ಎಂದು ಸ್ಪಷ್ಟಪಡಿಸಿದರು.

Edited By

Shruthi G

Reported By

Shruthi G

Comments