ಕುಮಾರಸ್ವಾಮಿ ಸಿ.ಎಂ ಆದರೆ, ಪರಮೇಶ್ವರ್ ಡಿ.ಸಿ.ಎಂ..!  

16 May 2018 9:43 AM | Politics
601 Report

ನೆನ್ನೆ ಅಷ್ಟೆ ರಾಜ್ಯ ವಿಧಾನ ಸಭಾ ಚುನಾವಣಾ ಫಲಿತಾಂಶ ಹೊರಬಂದಿದ್ದು ಬಹುಮತ ಪಡೆದಿರುವ ಬಿಜೆಪಿ ಕೂಡ ಸರ್ಕಾರ ರಚಿಸಲು ಆಗದೇ ಒದ್ದಾಡುವ ಪರಿಸ್ಥಿತಿ ಎದುರಾಗಿದೆ.  ಕಾಂಗ್ರೆಸ್ನ ಮೈತ್ರಿ ಸರ್ಕಾರದ ರಚನೆಗೆ ಈಗಾಗಲೇ ರೂಪುರೇಷೆಯನ್ನು ಸಿದ್ಧಪಡಿಸಲಾಗುತ್ತಿದೆ. 78 ಸ್ಥಾನ ಗಳಿಸಿದ ಕಾಂಗ್ರೆಸ್ ಹಾಗೂ 38 ಸ್ಥಾನ ಗಳಿಸಿದ ಜೆ.ಡಿ.ಎಸ್. ಪಕ್ಷದ ನಾಯಕರು ಈಗಾಗಲೇ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರದ ರಚನೆಯ ಹಕ್ಕುನ್ನು ಕೂಡ ಈಗಾಗಲೇ ಮಂಡಿಸಿದ್ದಾರೆ ಎಂದು ತಿಳಿಸಲಾಗಿದೆ.

ಇಂದು ಎರಡೂ ಪಕ್ಷಗಳ ಶಾಸಕಾಂಗ ಸಭೆಯು ನಡೆಯುವುದು ಬಹುತೇಕ ಖಚಿತವಾಗಿದ್ದು ಶಾಸಕಾಂಗ ನಾಯಕನನ್ನು ಆಯ್ಕೆ ಮಾಡಿ, ಶಾಸಕರ ಸಹಿ ಪಡೆದು ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಗುವುದು ಹಾಗೂ 5 ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಅಧಿಕಾರವನ್ನು ನಡೆಸಲಿದ್ದಾರೆ ಎಂದು ತಿಳಿಸಲಾಗಿದೆ. ಕಾಂಗ್ರೆಸ್ ನಲ್ಲಿ ದಲಿತ ನಾಯಕರಿಗೆ ಡಿ.ಸಿ.ಎಂ. ಹುದ್ದೆ ನೀಡಬೇಕೆಂಬ ಚರ್ಚೆ ಹಿನ್ನಲೆಯಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಾ. ಜಿ. ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುವುದು. ಇದರೊಂದಿಗೆ ತಲಾ 17 ಸಚಿವ ಸ್ಥಾನಗಳನ್ನು ಹಂಚಿಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಆಪರೇಷನ್ ಕಮಲಕ್ಕೆ ಬೀಳದಂತೆ ಉಭಯ ಪಕ್ಷಗಳ ನಾಯಕರು ಮೈತ್ರಿ ಸರ್ಕಾರದ ರಚನೆಗೆ ಸುದೀರ್ಘ ಚರ್ಚೆಯನ್ನು ನಡೆಸುತ್ತಿವೆ.

.

 

Edited By

Manjula M

Reported By

Manjula M

Comments