ಮಂಡ್ಯ ಜಿಲ್ಲೆಯ 7 ಕ್ಷೇತ್ರದಲ್ಲೂ ಜೆಡಿಎಸ್‌ಗೆ ಭಾರಿ ಮುನ್ನಡೆ..!

15 May 2018 12:20 PM | Politics
5804 Report

ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್‌ ಕೈ ತಪ್ಪಿದೆ. ಕಾಂಗ್ರೆಸ್‌ನ ಭದ್ರ ಕೋಟೆ ಎನಿಸಿಕೊಂಡಿದ್ದ ಮಂಡ್ಯದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಕೂಡ ಜೆಡಿಎಸ್‌ ಮುನ್ನಡೆಯನ್ನು ಗಳಿಸಿದೆ.

ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಪಕ್ಷ ಬದಲಾಯಿಸಿದ್ದ ಚೆಲುವರಾಯಸ್ವಾಮಿ ಸೇರಿದಂತೆ 7 ಕ್ಷೇತ್ರಗಳಲ್ಲೂ ಕೂಡ ಜೆಡಿಎಸ್‌ ಪಕ್ಷವೇ ಮುನ್ನಡೆ ಸಾಧಿಸಿದೆ. ಅಲ್ಲಿ ಕಾಂಗ್ರೆಸ್‌ನ ಇಬ್ಬರು ಮುಖಂಡರಾದ ಎಸ್‌.ಎಂ.ಕೃಷ್ಣ ಹಾಗೂ ಅಂಬರೀಶ್‌ ಅವರು ಕಾಂಗ್ರೆಸ್‌ಗೆ ಕೈಕೊಟ್ಟಿದ್ದು ಕಾಂಗ್ರೆಸ್‌ಗೆ ಭಾರಿ ಪರಿಣಾಮ ಬೀರಿರಬಹುದು ಎನ್ನುವುದು ಕೆಲವರ ಮಾತಾಗಿದೆ.ಮಂಡ್ಯ ಜಿಲ್ಲೆಯ ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೃಷ್ಣರಾಜಪೇಟೆ, ಕೃಷ್ಣರಾಜನಗರ ಎಲ್ಲ ಕ್ಷೇತ್ರಗಳಲ್ಲಿಯೂ ಕೂಡ ಜೆಡಿಎಸ್‌ ಮುನ್ನಡೆ ಕಾಯ್ದುಕೊಂಡು ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯನ್ನು ನೀಡಿದೆ.

Edited By

Manjula M

Reported By

Manjula M

Comments