ಮೊಬೈಲ್ ಅಪ್ಲಿಕೇಶನ್ ನಲ್ಲಿ ಸಿಗಲಿದೆ ಮತಗಟ್ಟೆ ಮಾಹಿತಿ..!

11 May 2018 10:21 AM | Politics
530 Report

ಇದೀಗ ರಾಜ್ಯದಲ್ಲಿ ಹೈವೊಲ್ಟೇಜ್ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಇನ್ನು ಒಂದೇ  ಒಂದು ದಿನ ಬಾಕಿ ಉಳಿದಿದೆ. ಈಗಾಗಲೇ ಬಹಿರಂಗ ಪ್ರಚಾರವು ಅಂತ್ಯಗೊಂಡಿದ್ದು, ಅಭ್ಯರ್ಥಿಗಳು, ಕಾರ್ಯಕರ್ತರು ಮನೆ-ಮನೆಗೆ ತೆರಳಿ ಪ್ರಚಾರವನ್ನು ನಡೆಸುತ್ತಿದ್ದಾರೆ.

ಮತದಾರರಿಗೆ ಸುಲಭವಾಗಲಿ ಎಂದು, ಮತ ಕಟ್ಟೆ ಎಲ್ಲಿದೆ ಎಂಬುವುದನ್ನು ಸುಲಭವಾಗಿ ತಿಳಿಯಲು ಚುನಾವಣಾ ಆಯೋಗ 'ಚುನಾವಣಾ' ಎಂಬ ಮೊಬೈಲ್  ಅಪ್ಲಿಕೇಶನ್‌ ಅನ್ನು ಸಿದ್ಧಪಡಿಸಿದೆ. ಎಸ್‌ಎಂಎಸ್ ಮೂಲಕವೂ ಜನರು ಮತಗಟ್ಟೆಯ ಮಾಹಿತಿಯನ್ನು ತಿಳಿಯಬಹುದು. ಮತದಾರರು EPIC ಸ್ಟೇಸ್ ವೋಟರ್‌ ಐಡಿ ನಂಬರ್ ಅನ್ನು 9731979899 ನಂಬರ್‌ಗೆ  ಮೆಸೇಜ್ ಮಾಡಿದರೆ ಮತಗಟ್ಟೆ ಎಲ್ಲದೆ? ಎಂಬ ಮಾಹಿತಿ ತಿಳಿಯಬಹುದು.

 

Edited By

Manjula M

Reported By

Manjula M

Comments