ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಟಿ ರಾಜಕಾರಣಿ ರಮ್ಯಾ..!?

10 May 2018 11:14 AM | Politics
1256 Report

ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಟಿ- ರಾಜಕಾರಣಿ ರಮ್ಯಾ ಅವರ  ಹೆಸರು ಕೇಳಿಬರುತ್ತಿದೆ ಎಂದು ಖ್ಯಾತ ಇಂಗ್ಲಿಷ್ ವೆಬ್ ಸೈಟ್ ಒಂದು ತಿಳಿಸಿದೆ.

ಬಹಿರಂಗವಾಗಿ ಅಲ್ಲದಿದ್ದರೂ ಕೂಡ ಪಕ್ಷದಲ್ಲಿ ಆಂತರಿಕವಾಗಿ ಆಗಬಹುದು ಎಂಬ ಅಭಿಯಾನ ಬಿರುಸಿನಿಂದ ಸಾಗಿದ್ದು, ಅಂತಿಮವಾಗಿ "ಆಕೆ" ಆಂತರಿಕವಾಗಿ ಜಯವನ್ನು ಸಾಧಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಆ ಹೆಸರು ರಮ್ಯ ಅವರದ್ದ ಎಂಬುದು ಸ್ಪಷ್ಟವಾಗಿಲ್ಲವಾದರೂ ಸಹ ಪಕ್ಷದ ಆಂತರಿಕ ಮೂಲಗಳು ಹೇಳುವಂತೆ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಕೇಳಿಬರುತ್ತಿದೆ. ಒಂದು ವೇಳೆ  ನಟಿ ರಾಜಕಾರಣಿ ರಮ್ಯಾ ಈ ಹುದ್ದೆಗೆ ಆಯ್ಕೆಯಾದರೆ, ಅಂಬಿಕಾ ಸೋನಿ ನಂತರ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿರುವ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೂ ಕೂಡ ರಮ್ಯ ಪಾತ್ರರಾಗಲಿದ್ದಾರೆ. ಯುವ ಕಾಂಗ್ರೆಸ್ ಅಧ್ಯಕ್ಷ ಅಮರೀಂದರ್ ಸಿಂಗ್ ರಾಜಾ ಅವರಿಗೆ ಈಗಾಗಲೇ ಅನೌಪಚಾರಿಕ ಬೀಳ್ಕೊಡುಗೆಯನ್ನು ನೀಡಲಾಗಿದ್ದು, ರಾಷ್ಟ್ರನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಹೆಚ್ಚಿಸುವುದನ್ನು ಇದು ಬಿಂಬಿಸುತ್ತದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಅಮರೀಂದರ್ ಸಿಂಗ್ ರಾಜಾ ಪ್ರತಿಕ್ರಿಯಿಸಿದ್ದಾರೆ. ಒಂದು ವೇಳೆ ರಮ್ಯ ಅವರ ಹೆಸರು ಸ್ಪಷ್ಟವಾದರೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಾರೆ.

 

Edited By

Manjula M

Reported By

Manjula M

Comments

Cancel
Done