ಮಹಿಳೆಯರಿಗೆಂದೇ ರೆಡಿಯಾಗುತ್ತಿದೆ ಪಿಂಕ್ ಮತಗಟ್ಟೆ

ಭಾರತ ಚುನಾವಣಾ ಆಯೋಗ ಇದೇ ಪ್ರಪ್ರಥಮ ಬಾರಿಗೆ ಮಹಿಳೆಯರಿಗಾಗಿ ಪ್ರತ್ಯೇಕ ಮತಗಟ್ಟೆಯನ್ನು ಪರಿಚಯ ಮಾಡುತ್ತಿದೆ. ಅದನ್ನು ಗುಲಾಬಿ ಮತಗಟ್ಟೆಗಳೆಂದು ಕರೆಯಲಾಗುತ್ತಿದೆ.
ಚುನಾವಣಾ ಆಯೋಗವು ಗುಲಾಬಿ ಬಣ್ಣದ ಮತಗಟ್ಟೆಗಳು ಮಹಿಳೆಯರೆಲ್ಲರನ್ನು ಸಬಲೀಕರಣಗೊಳಿಸಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಉದ್ದೇಶದವನ್ನು ಹೊಂದಿದೆ ಎಂದು ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗುಲಾಬಿ ಬಣ್ಣದ ಮತಗಟ್ಟೆಗಳನ್ನು ಸಿದ್ಧಪಡಿಸುವ ಕೆಲಸ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಗುಲಾಬಿ ಬಣ್ಣದ ಮತಗಟ್ಟೆಗಳ ಗೋಡೆಗಳಿಗೂ ಗುಲಾಬಿ ಬಣ್ಣ ಬಳಿಯಲಾಗುತ್ತಿದೆ. ಈ ರೀತಿಯ ಮತಗಟ್ಟೆಗಳನ್ನು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 450 ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ. ಮತಗಟ್ಟೆ ಅಧಿಕಾರಿ, ಚುನಾವಣಾ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲರೂ ಮಹಿಳೆಯರೇ ಇರುತ್ತಾರೆ. ಸಿಬ್ಬಂದಿ ಕೂಡ ಪಿಂಕ್ ಬಣ್ಣದ ವಸ್ತ್ರಗಳನ್ನು ಧರಿಸಿರುತ್ತಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
Comments