ಮತದಾನದ ಬಗ್ಗೆ ಜಾಗೃತಿ ಮೂಡಿಸಿದ ಬಿಗ್ ಬಾಸ್ ಮನೆಯ ಗೊಂಬೆ..!

02 May 2018 10:02 AM | Politics
388 Report

ಬಿಗ್ ಬಾಸ್ ಸೀಸನ್ 5 ರಲ್ಲಿ ಕಾಮನ್ ಮ್ಯಾನ್ ಕಡೆಯಿಂದ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ  ತಮ್ಮ ಮಾತಿನ ಶೈಲಿಯಲ್ಲೆ ಫೇಮಸ್ ಆಗಿ ಸೆಲೆಬ್ರಿಟಿ ಎಂದೆನಿಸಿಕೊಂಡಿದ್ದ ನಿವೇದಿತಾ ಗೌಡ ಅವರು ಚುನಾವಣಾ ಸಂದರ್ಭದಲ್ಲಿ ಇದೀಗ ಮತದಾನದ ಕುರಿತು ಜಾಗೃತಿಯನ್ನು ಮೂಡಿಸಲು ಮುಂದಾಗಿದ್ದಾರೆ.

ಜಿಲ್ಲಾ ಪಂಚಾಯ್ತಿ ವತಿಯಿಂದ ಆಯೋಜಿಸಲಾಗಿರುವ ಮತ ಜಾಗೃತಿ ಕಾರ್ಯಕ್ರಮಕ್ಕೆ ರಾಯಭಾರಿಯಾಗಿರುವ ನಿವೇದಿತಾ ಗೌಡ ಅವರು ಮತದಾನ ಮಾಡಿದವರೇ ನಿಜವಾದ ಬಿಗ್‍ಬಾಸ್ ಎಂದು ಹೇಳುವ ಮೂಲಕ ಮತದಾನ ಮಾಡುವಂತೆ ಜನರಲ್ಲಿ ಮನವಿ ಮಾಡುವ ಜಾಗೃತಿ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿದೆ. ನಾವು ನೀವು ಚೆನ್ನಾಗಿರಬೇಕಾದರೆ ಕಡ್ಡಾಯವಾಗಿ ಒಂದು ನಿಯಮವನ್ನು ಪಾಲಿಸಬೇಕು. ನಮ್ಮದ್ದು ಪ್ರಜಾಪ್ರಭುತ್ವ ದೇಶ. ಈ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪಭ್ರುಗಳು. ಇದನ್ನು ಯಶಸ್ಸು ಗಳಿಸಲು ಪ್ರಜೆಗಳಾದ ನಮ್ಮೆಲರ ಕರ್ತವ್ಯ. ಅದಕ್ಕಾಗಿ ನಾವು ನಮ್ಮ ಮತವನ್ನು ಮತಗಟ್ಟೆಗೆ ಬಂದು ಚಲಾಯಿಸಬೇಕು. ಚುನಾವಣೆ ದಿನ ಮತಗಟ್ಟೆಗೆ ಹೋಗಿ ನಾನು ನನ್ನ ಮತವನ್ನು ಹಾಕುತ್ತಿದ್ದಿನಿ. ನೀವು ಕೂಡ ಮತಗಟ್ಟೆಗೆ ಬಂದು ನಿಮ್ಮ ಮತವನ್ನು ಚಲಾಯಿಸಿ. ನಾವು ನಮ್ಮ ನೆರೆಹೊರೆಯವರ ಮತದಾನದ ಬಗ್ಗೆ ಜಾಗೃತಿ ಮೂಡಿಸೋಣ ಹಾಗೂ ಕಡ್ಡಾಯವಾಗಿ ಅವರು ಸಹ ಮತ ಹಾಕುವಂತೆ ಮಾಡೋಣ ಎಂದು ನಿವೇದಿತಾ ಗೌಡ ವಿಡಿಯೋ ಮೂಲಕ ತಿಳಿಸಿದ್ದಾರೆ. ಈ ವಿಡಿಯೋ ನೋಡಿರುವ ಗೊಂಬೆ ಅಭಿಮಾನಿಗಳಿಗೆ ಸಖತ್ ಖುಷಿಯಲ್ಲಿದ್ದಾರೆ.

Edited By

Manjula M

Reported By

Manjula M

Comments