ರಾಕಿಂಗ್ ಸ್ಟಾರ್ ಯಶ್ ಚುನಾವಣಾ ಪ್ರಚಾರ ಆರಂಭ

02 May 2018 9:35 AM | Politics
578 Report

ರಾಜ್ಯ ವಿಧಾನ ಸಭಾ ಚುನಾವಣಾ ಹಿನ್ನಲೆಯಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದೆ. ಮೇ 12ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ತಮಗೆ ತುಂಬಾ ಆಪ್ತರಾಗಿರುವ ಕೆಲವರ ಪರವಾಗಿ ಮಾತ್ರ ಪ್ರಚಾರ ಮಾಡುವುದಕ್ಕೆ  ರಾಕಿಂಗ್ ಸ್ಟಾರ್ ಯಶ್ ಮುಂದಾಗಿದ್ದಾರೆ.

ಯಶ್ ಅವರ ಚುನಾವಣಾ ಪ್ರಚಾರ ಈಗಾಗಲೇ ಆರಂಭವಾಗಿದ್ದು, ಮೈಸೂರಿನಿಂದ ಆರಂಭಿಸಿ ಕರ್ನಾಟಕದಾದ್ಯಂತ ತಮ್ಮ ಆತ್ಮೀಯರ ಪರವಾಗಿ ಪ್ರಚಾರ ಮಾಡುವುದಾಗಿ ಯಶ್ ಹೇಳಿದ್ದಾರೆ. ಮೈಸೂರಿನಲ್ಲಿ ಸಾ.ರಾ. ಮಹೇಶ್ ಪರವಾಗಿ ಯಶ್ ಚುನಾವಣಾ ಪ್ರಚಾರ ಕಾರ್ಯ ಶುರು ಮಾಡಿದ್ದಾರೆ. ನಾನು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿಲ್ಲ. ನನಗೆ ತಿಳಿದಿರುವ  ತಮ್ಮ ತಮ್ಮ ಕ್ಷೇತ್ರಕ್ಕೆ ಒಳ್ಳೆಯ ಕೆಲಸ ಮಾಡುತ್ತಾರೆಂಬ ನಂಬಿಕೆಯಿರುವ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಾಗಿ ನಾನು ನಿರ್ಧರಿಸಿದ್ದೇನೆ. ನಾನು ಯಾರ ಪರವಾಗಿ ಪ್ರಚಾರ ಮಾಡುತ್ತೇನೋ ಅವರೆಲ್ಲರೂ ನನಗೆ ತುಂಬಾ ವರ್ಷಗಳಿಂದ ಗೊತ್ತಿರುವವರು. ಅವರಾಗಿಯೇ ಬಂದು ಪ್ರಚಾರ ಕಾರ್ಯಕ್ಕೆ ನೆರವಾಗುವಂತೆ ಕೇಳಿಕೊಂಡಿದ್ದರು ಈಗಾಗಲೇ ಸಾ.ರಾ.ಮಹೇಶ್, ಎಂ.ಬಿ.ಪಾಟೀಲ್, ಸಿ.ಎಂ.ಉದಾಸಿ, ವಿನಯ್ ಕುಲಕರ್ಣಿ, ಜ್ಯೋತಿ ಗಣೇಶ್, ರಾಮದಾಸ್, ಸತೀಶ್ ರೆಡ್ಡಿ ಪರ ಪ್ರಚಾರ ಮಾಡಲು ನಿರ್ಧರಿಸಿದ್ದೇನೆ. ಈ ಪಟ್ಟಿಯಲ್ಲಿ ಇನ್ನೂ ಅನೇಕರು ಇದ್ದಾರೆ ಎಂದು ಯಶ್ ಹೇಳಿದ್ದಾರೆ.

 

Edited By

Manjula M

Reported By

Manjula M

Comments

Cancel
Done