ಗುರುತಿನ ಚೀಟಿ ಇಲ್ಲದೆ ವೋಟ್ ಹಾಕಬಹುದು..?ಹೇಗೆ ಅಂತೀರಾ..ಈ ಸುದ್ದಿ ಓದಿ.

27 Apr 2018 1:04 PM | Politics
925 Report

ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಮುಂದಿನ ತಿಂಗಳು ನಡೆಯುವ 12ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಗುರುತಿಗೆ ಸಂಬಂಧಪಟ್ಟಂತೆ ಕೇಂದ್ರ ಚುನಾವಣಾ ಆಯೋಗವು ಪರಿಗಣಿಸಬಹುದಾದ 12 ಪರ್ಯಾಯ ಗುರುತುಪತ್ರಗಳ ಬಗ್ಗೆ ಆದೇಶ ನೀಡಿದೆ. ಇದರಿಂದಾಗಿ ಮತದಾರರಲ್ಲಿ ಉಂಟಾಗಿರುವ ಗೊಂದಲ ನಿವಾರಣೆಯಾದಂತಾಗಿದೆ.

ಭಾರತ ಚುನಾವಣಾ ಆಯೋಗವು ಈಗಾಗಲೇ ಎಲ್ಲ ಮತದಾರರಿಗೆ ಭಾವಚಿತ್ರವಿರುವ ಗುರುತು ಪತ್ರಗಳನ್ನು(ಇಪಿಐಸಿ) ನೀಡಿದೆ. ಮತಗಟ್ಟೆಗಳಲ್ಲಿ ಮತ ಚಲಾಯಿಸುವುದಕ್ಕು ಮೊದಲು ಮತದಾರರು ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ತೋರಿಸಬೇಕು. ಮತದಾರರು ತಮ್ಮ ಗುರುತನ್ನು ಸಾಬೀತು ಪಡಿಸಲು ಇಪಿಐಸಿ ಹಾಜರುಪಡಿಸದಿದ್ದಲ್ಲಿ, ತಾನು ಆದೇಶದಲ್ಲಿ ತಿಳಿಸಿರುವ 12 ಪರ್ಯಾಯ ಗುರುತು ಪತ್ರಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಆನಂತರ ಮತ ಚಲಾಯಿಸಲು ಆಯೋಗ ಅವಕಾಶವನ್ನು ಮಾಡಿಕೊಟ್ಟಿದೆ. ಪಾಸ್‍ ಪೋರ್ಟ್, ವಾಹನ ಚಾಲನಾ ಪರವಾನಗಿ(ಡಿಎಲ್), ಕೇಂದ್ರ/ರಾಜ್ಯ ಸರ್ಕಾರ, ಸಾರ್ವಜನಿಕ ವಲಯ ಸಂಸ್ಥೆಗಳು/ಖಾಸಗಿ ನಿಯಮಿತ ಸಂಸ್ಥೆಗಳಿಂದ ಉದ್ಯೋಗಿಗಳಿಗೆ ನೀಡಲಾದ ಭಾವಚಿತ್ರವಿರುವ ಸೇವಾ ಗುರುತು ಪತ್ರ,ಗಳು, ಬ್ಯಾಂಕ್/ಅಂಚೆ ಕಚೇರಿಯಿಂದ ನೀಡಲಾದ ಭಾವಚಿತ್ರವಿರುವ ಪಾಸ್‍ಬುಕ್‍ಗಳು, ಪ್ಯಾನ್ ಕಾರ್ಡ್, ಎನ್‍ಪಿಆರ್ ಅಡಿ ಆರ್‍ಜಿಐನಿಂದ ನೀಡಲಾದ ಸ್ಮಾರ್ಟ್ ಕಾರ್ಡ್, ಎಂಜಿನರೇಗಾ ಉದ್ಯೋಗ ಚೀಟಿ, ಕಾರ್ಮಿಕ ಸಚಿವಾಲಯ ಯೋಜನೆ ಅಡಿ ನೀಡಲಾಗಿರುವ ಆರೋಗ್ಯ ವಿಮಾ ಸ್ಮಾಟ್ ಕಾರ್ಡ್, ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆಪತ್ರ, ಚುನಾವಣಾ ಆಯೋಗದಿಂದ ನೀಡಲಾದ ದೃಢೀಕೃತ ಭಾವಚಿತ್ರವಿರುವ ಮತದಾರರ ಚೀಟಿ, ಸಂಸದರು/ಶಾಸಕರಿಗೆ ನೀಡಲಾದ ಅಧಿಕೃತ ಗುರುತು ಚೀಟಿಗಳು ಹಾಗೂ ಆಧಾರ್ ಕಾರ್ಡ್‍ಗಳು ಇವುಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಮತವನ್ನು ಚಲಾಯಿಸಬಹುದು.

 

 

Edited By

Manjula M

Reported By

Manjula M

Comments