ಪ್ರಕಾಶ್ ರೈ ಗೆ ತಿರುಗೇಟು ಕೊಟ್ಟ ಶಿಲ್ಪಾ ಗಣೇಶ್

24 Apr 2018 3:37 PM | Politics
582 Report

ರಾಜ್ಯ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ನಾನಾ ರೀತಿಯ ಚರ್ಚೆಗಳು ಕೇಳಿ ಬರುತ್ತಿವೆ.  ಇದೇ ಬೆನ್ನಲೆ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ತೀವ್ರ ಹೋರಾಟವನ್ನು  ಮಾಡುತ್ತೇನೆ ಎಂದಿದ್ದ ನಟ ಪ್ರಕಾಶ್ ರೈ ಹೇಳಿಕೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ  ಪತ್ನಿ, ಬಿಜೆಪಿ  ಪಕ್ಷದ ನಾಯಕಿ ಶಿಲ್ಪಾ ಗಣೇಶ್ ತಿರುಗೇಟನ್ನು  ನೀಡಿದ್ದಾರೆ.

ಟ್ವಿಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಲ್ಪಾ ಗಣೇಶ್ 'ಹೌದು ಸ್ವಾಮೀ.. ಹೋರಾಟ ಮಾಡಬೇಕಾದ್ದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನಿಮ್ಮ ಗಂಜಿ ಕೇಂದ್ರಗಳೆಲ್ಲಾ ಮುಚ್ಚಿ ಹೋಗುತ್ತದಲ್ಲಾ ಅದಕ್ಕೆ' ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮೊದಲು ಪ್ರಕಾಶ್ ರೈ ಬಿಜೆಪಿ ಮತ್ತು ಆರ್ ಎಸ್‌ಎಸ್ ಬುಡಸಮೇತ ಕಿತ್ತು ಹಾಕುತ್ತೇವೆ ಎಂದಿದ್ದಕ್ಕೂ ಶಿಲ್ಪಾ ತಿರುಗೇಟು ನೀಡಿದ್ದರು. ಬಿಜೆಪಿ ಮತ್ತು ಆರ್ ಎಸ್‌ಎಸ್ ಕೀಳೋಕೆ ಕಮ್ಯುನಿಸ್ಟ್ ಗಿಡವೂ ಅಲ್ಲ, ಗಂಜಿ ಕೇಂದ್ರವೂ ಅಲ್ಲ. ಕೋಟ್ಯಂತರ ದೇಶಪ್ರೇಮಿಗಳಿಗೆ ನೆರಳು ನೀಡುತ್ತಿರುವ ಬೃಹತ್ ಆಲದ ಮರ ಎಂದು ಹೇಳಿಕೊಂಡಿದ್ದರು.

Edited By

Manjula M

Reported By

Manjula M

Comments