ಸಿದ್ದರಾಮಯ್ಯನವರ ಆಪ್ತ ಬಿಜೆಪಿಗೆ ಸೇರ್ಪಡೆ-ವರುಣಾದಲ್ಲಿ ಸಿ.ಎಂ ಗೆ ಬಿಗ್ ಶಾಕ್

14 Apr 2018 2:33 PM | Politics
743 Report

ವಿಧಾನ ಸಭಾ ಚುಣಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ದೊಡ್ಡದೊಂದು ಅಖಾಡವೇ ಸಿದ್ದವಾಗುವಂತಿದೆ. ಈಗಾಗಲೇ ಪಕ್ಷದಿಂದ ಪಕ್ಷಕ್ಕೆ ಹಾರುವ ಕೆಲಸಗಳು ಕೂಡ ಶುರುವಾಗಿವೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕೆಲವು ಮುಖಂಡರು ಈಗಾಗಲೇ ಬಿಜೆಪಿ ಪಕ್ಷವನ್ನು ಸೇರಿದ್ದಾರೆ. ಅದರಲ್ಲೂ ಸಿಎಂ‌ ಸಿದ್ದರಾಮಯ್ಯನ ಆಪ್ತರಾದ ಸಿದ್ದೇಗೌಡ  ಕಾಂಗ್ರೇಸ್​​​​ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿದ್ದು,ರಾಜಕೀಯ ವಲಯದಲ್ಲಿ ಭಾರಿ ಸಂಚಲನವನ್ನೆ  ಮೂಡಿಸಿದೆ ಎಂದು ಹೇಳಬಹುದು. ರಾಜಕೀಯದ ದೊಂಬರಾಟದಲ್ಲಿ ಇವೆಲ್ಲಾ ಕಾಮನ್ ಅನಿಸಿದರೂ ಕೆಲವೊಮ್ಮೆ ಏಕೆ ಏನು ಅಂತ ಚಿಂತೆ ಮಾಡಬೇಕಾಗುತ್ತದೆ. ಸಿದ್ದೇಗೌಡ ಮೆಲ್ಲಹಳ್ಳಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾಗಿದ್ದು, ಸಿದ್ದರಾಮಯ್ಯನವರ ಸನಿಹದ ಆಪ್ತರಾಗಿದ್ದರು.ಇಂದು ಬಿಎಸ್​​ವೈ ಪುತ್ರ ವಿಜಯೇಂದ್ರ‌ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದು ಚುನಾವಣೆ ಕಾವು ಮತ್ತಷ್ಟು ಹೆಚ್ಚಾಗುತ್ತಿದೆ. ಸಿದ್ದೇಗೌಡರು ಹೇಳಿರುವುದನ್ನು ನೋಡುವುದಾದರೆ ಸಿದ್ದರಾಮಯ್ಯ ಆಡಳಿತದಲ್ಲಿ ಎಲ್ಲಾ ಕಳಪೆ ಕಾಮಗಾರಿಯೇ ನಡೆದಿದೆ. ಸಿದ್ದರಾಮಯ್ಯ ಅವರನ್ನ ನೋಡಲು ಎಲ್ಲರೂ ಗಂಟೆ ಗಟ್ಟಲೇ ಕಾಯಬೇಕು. ಹಾಗೆ ನಮ್ಮ‌ ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಕಿಡಿಯನ್ನು ಕೂಡ ಕಾರಿದರು. ಖಾಸಗಿ ಹೋಟೆಲ್​​ನಲ್ಲಿ ಸಿದ್ದೇಗೌಡರು ಸೇರಿದಂತೆ ಅನೇಕರನ್ನ ಪಕ್ಷಕ್ಕೆ ಬರ ಮಾಡಿಕೊಂಡ ನಂತರ ಮಾತನಾಡಿದ ವರುಣಾದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಬಿಎಸ್​​ವೈ ಪುತ್ರ ವಿಜಯೇಂದ್ರ‌ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿಯನ್ನು ಕೂಡ ನಡೆಸಿದರು. ವರುಣಾ ಕ್ಷೇತ್ರದಲ್ಲಿ ಈಗಾಗಲೆ ಆಂದೋಲನ ಶುರುವಾಗಿದೆ.ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಜನರು ಬಯಸಿದ್ದಾರೆ. ನಾನು ಎರಡು ವಾರವಷ್ಟೆ ವರುಣಾ ಕ್ಷೇತ್ರವನ್ನು ಸುತ್ತಿದ್ದೇನೆ. ಆದರೆ ನಿರೀಕ್ಷೆಗೂ ಮೀರಿ ವರುಣಾದಲ್ಲಿ ಜನ ಬೆಂಬಲ ಸಿಕ್ಕಿದೆ. ನನಗೆ ಯುವಕರು ಹೆಚ್ಚು ಮನ್ನಣೆ ನೀಡುತ್ತಿದ್ದಾರೆ ಎಂದರು. ಸಿದ್ದರಾಮಯ್ಯನವರು ಈ ಕ್ಷೇತ್ರವನ್ನ ರಾಜ್ಯದಲ್ಲೇ ಮಾದರಿ‌ ಕ್ಷೇತ್ರ ಮಾಡಬಹುದಿತ್ತು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

Edited By

Manjula M

Reported By

Manjula M

Comments