ಇಷ್ಟಕ್ಕು ಮೋದಿಜೀಯವರು ಪ್ರಚಾರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರ..!?

12 Apr 2018 12:16 PM | Politics
493 Report

ರಾಜಕೀಯ ಅಧಿಕಾರದ ಗದ್ದುಗೆ ಏರಿದವರು ಸಾಕಷ್ಟು ಜನ ಇದ್ದಾರೆ. ಅವರಲ್ಲಿ ನರೇಂದ್ರ ಮೋದಿ ಅವರು ಕೂಡ ಒಬ್ಬರು. 2014 ರಲ್ಲಿ ನಮ್ಮ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದರು. ನಮ್ಮ ದೇಶಕ್ಕಾಗಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದರೂ ಕೂಡ, ಕೆಲವೊಮ್ಮೆ ಯಾಕೆ ಹೀಗೆ ಮಾಡಿಬಿಟ್ಟರು ಅಂದು ಕೊಳ್ಳುತ್ತೇವೆ. ಒಬ್ಬ ದೇಶದ ಒಳ್ಳೆಯ ನಾಯಕ ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದರೂ ಕೂಡ ನರೇಂದ್ರ ಮೋದಿ ಅವರು ಏಕೆ ಪ್ರಚಾರಕ್ಕೆ ಬರುತ್ತಿಲ್ಲ ಎಂಬುದು ಕೆಲವರನ್ನ ಕಾಡುತ್ತಿರುವ ಪ್ರಶ್ನೆಯಾಗಿದೆ. ಮೋದಿಯವರು ತುಂಬಾ ಚಾಣಾಕ್ಷರು ಕೂಡ ಹೌದು.. ಆದರೂ ಸಾಕಷ್ಟು ಪ್ರಶ್ನೆಗಳು ಅನೇಕರಲ್ಲಿ ತಲೆ ಎತ್ತಿರುವುದಂತೂ ಸತ್ಯ.

ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲರು ಕೂಡ ಪ್ರಚಾರದಲ್ಲಿ ತೊಡಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಯನ್ನು ಹಿಡಿಯಲು ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ.ಮೋದಿಯವರು ಬಿಜೆಪಿಯ ಪ್ರಮುಖ ಪ್ರಚಾರಕ್ಕಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು 2019 ರ ನಂತರವು ಅಧಿಕಾರದಲ್ಲೆ ಮುಂದುವರೆಯಬೇಕೆಂಬ ಕಾತುರ ಇದ್ದರೂ ಕೂಡ ಯಾಕೆ ಪ್ರಚಾರಕ್ಕೆ ಬರದೆ ಸುಮ್ಮನಿದ್ಧಾರೆ? ಮೊದಲೆ ಮೋದಿಯವರು ತುಂಬಾ ಚಾಣಾಕ್ಷರು ಎಂದುಕೊಂಡಿದ್ದಾರೆ.. ಈ ವಿಷಯದಲ್ಲಿ ಯಾವ ರೀತಿ ಚಾಣಾಕ್ಷತೆಯನ್ನು ತೋರಿಸುತ್ತಾರೆ ಎನ್ನುವುದೇ ಬಹಳ ಗಂಭಿರದ ವಿಷಯ.ಈಗಾಗಲೇ ಬಿಜೆಪಿ ಪಕ್ಷದಿಂದ ಬಿ.ಎಸ್ ಯಡಿಯುರಪ್ಪರವರು ಮುಖ್ಯಮಂತ್ರಿಯ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜ್ಯ ವಿಧಾನ ಸಭಾ ಚುನಾವಣೆಯ ಅಭ್ಯರ್ಥಿಯಾಗಿ ಶಿಕಾರಿಪುರದಿಂದ ಸ್ಪರ್ಥಿಸುತ್ತಿದ್ದಾರೆ. ಮೋದಿಯವರು ಕೂಡ ಜಿಜೆಪಿಯ ಪರವಾಗಿ ಬಿ.ಎಸ್. ಯಡಿಯೂರಪ್ಪ ಅವರ ಪರವಾಗಿ ಇಷ್ಟೊತ್ತಿಗಾಗಲೆ ಪ್ರಚಾರವನ್ನು ಶುರು ಮಾಡಬೇಕಿತ್ತು.. ಆದರೆ ಮತ್ತೊಮ್ಮೆ ಎಲ್ಲರಲೂ ಮೂಡುವ ಪ್ರಶ್ನೆ ಇನ್ನೂ ಏಕೆ ಮೋದಿಜೀ ಪ್ರಚಾರಕ್ಕೆ ಬಂದಿಲ್ಲ?

ಯಡಿಯೂರಪ್ಪ ಅವರಿಗೆ ವಯಸ್ಸು 75 ಆಗಿದೆ. ಅವರಲ್ಲಿ ಬಹಳ ಹಿಂದೆ ಸಾಕಷ್ಟು ವೈಮನಸ್ಸುಗಳು ಇದ್ದವು. ಈಗಾಗಿ  ಪಕ್ಷದ ನಾಯಕರನ್ನಾಗಿ ಮೋದಿಯವರು ಕೆಲವರನ್ನು ನೇಮಿಸಿಕೊಂಡಿದ್ದಾರೆ. ಅವರಲ್ಲಿ ಬಿಜೆಪಿಯ ಮುಖಂಡರಾದ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಯಶ್ವಂತ್ ಸಿನ್ಹಾ ಅವರ ಮಾರ್ಗದರ್ಶನದಲ್ಲಿ ನಡೆಯಬೇಕು. ಆಗ ಮಾತ್ರ ರಾಜಕೀಯಕ್ಕೆ ಒಂದು ತೂಕ ಎಂದು ಹೇಳಿದ್ದಾರೆ.ಇತರ ಪಕ್ಷದ ನಾಯಕರಾದ ಉತ್ತರ ಪ್ರದೇಶದ ಕಲ್ರಾಜ್ ಮಿಶ್ರಾ ಮತ್ತು ನಜ್ಮಾಹೆಲ್ತಾಪುರರ ಅಭ್ಯರ್ಥಿಗಳಿಗೆ 75 ವರ್ಷ ಆಗಿದ್ದ ಮೇಲೆ ಕ್ಯಾಬಿನೆಟ್ ನಿಂದ ಹೊರಗುಳಿದರು.. ಯಾಕೆ ಎನ್ನುವುದನ್ನು ನಾವು ಈ ವಿಷಯದಲ್ಲಿ ಗಮನಿಸಬೇಕಾಗುತ್ತದೆ.

ಮೋದಿಯವರ ಮುಂದೆ ಎಲ್ಲಾ ರಾಜಕೀಯ ಪಕ್ಷಗಳ ಬಗ್ಗೆ ಸಂಪೂರ್ಣವಾದ ಚಿತ್ರಣವಿದೆ. 2011 ರಲ್ಲಿ ಭ್ರಷ್ಟಚಾರದ ಆರೋಪಗಳ ಅಡಿಯಲ್ಲಿ ಸಿಲುಕಿ ಕರ್ನಾಟಕದ ಮುಖ್ಯಮಂತ್ರಿಯಾಗಿ ರಾಜೀರಾಮೆ ನೀಡಬೇಕಾದ ಪರಿಸ್ಥಿತಿ  ಯಡಿಯೂರಪ್ಪಅವರಿಗೆ ಬಂದಿತ್ತು. ಇದು ಲೋಕಾಯುಕ್ತವರದಿಯ ಭ್ರಷ್ಟಾಚಾರದ ಅಪರಾಧಿ ಎಂದು ತಿಳಿದು ಬಂದ ನಂತರ ಬಿಜೆಪಿಯ ಕೇಂದ್ರ ನಾಯಕತ್ವವನ್ನು ತೊರೆಯಬೇಕಾಯಿತು.ಬಿಜೆಪಿಯ ಸೋಲಿಗೆ ಕಾರಣವಾದ ಯಡಿಯೂರಪ್ಪ ಪಕ್ಷವನ್ನು ಸಹ ಅವರನ್ನು ಪ್ರಸ್ತಾಪಿಸುವ ನಿರ್ಧಾರವನ್ನು ರಾಜಕೀಯವು ಕಡ್ಡಾಯವಾಗಿ ಆದೇಶಿಸಲಾಗಿತ್ತು.2013 ರ ಅಸೆಂಬ್ಲಿ ಚುನಾವಣೆಯಲ್ಲಿ ಲಿಂಗಾಯಿತ ಮತಗಳನ್ನು ವಿಂಗಡಿಸಲು ಕರ್ನಾಟಕ ಜನತಾ ಪಕ್ಷವನ್ನು ರಚಿಸಿದರು.  

ಬಿಹಾರ, ಜಾರ್ಖಂಡ್, ಹರಿಯಾಣ, ಉತ್ತರಪ್ರದೇಶ ಮತ್ತು ಇತ್ತೀಚೆಗೆ ಗುಜರಾತ್ನಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಯೋಜಿಸಿಲ್ಲ ಮತ್ತು ಮೋದಿಯವರ ಮುಖಂಡತ್ವದಿಂದ ಮುನ್ನಡೆಸಿದರು. ಅದಕ್ಕಾಗಿಯೇ ಕಾಂಗ್ರೆಸ್ ಗೆಲ್ಲಲು ಮೋದಿ ಕಾಂಗ್ರೆಸ್ಗೆ ಇಷ್ಟವಾಗುತ್ತಿದೆ ಎಂದು ಮೋದಿ ತಿಳಿದಿದ್ದಾರೆ. ಲೋಕಸಭೆ ಚುನಾವಣೆಗಳಿಗೆ ಮುಂಚಿತವಾಗಿ ಮೋದಿಜೀ ಅವರು ಯಾವುದೇ ರೀತಿಯ ಆಪಾದನೆಯನ್ನು ತೆಗೆದುಕೊಳ್ಳಲು ಬಯಸುವುದಿಲ್ಲ ಎಂದಿದ್ದಾರೆ.ಒಂದು ವೇಳೆ ಬಿಜೆಪಿ ಪಕ್ಷವು  ಕರ್ನಾಟಕವನ್ನು ಕಳೆದುಕೊಂಡರೆ ತುಂಬಾ ಕಷ್ಟದ ಪರಿಸ್ಥಿಯನ್ನು ಎದುರಿಸಬೇಕಾಗುತ್ತದೆ.2013 ರಲ್ಲಿ ನಡೆದ ಚುನಾವಣೆಯಲ್ಲಿ ಕೆಜೆಪಿ ಪಕ್ಷವು ಆರು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದ್ದಂತಹ 70 ಸ್ಥಾನಗಳಲ್ಲೂ ಅದು ಎರಡನೇಯ ಸ್ಥಾನದಲ್ಲಿತ್ತು ಅಥವಾ ಅದನ್ನು ಹೀಗೂ ಹೇಳಬಹುದೇನೋ ಬಿಜೆಪಿ ಮತ್ತು ಕಾಂಗ್ರೇಸ್ ನ ನಡುವೆ ಒಳ್ಳೆಯ ರೀತಿಯ ಪೈಪೋಟಿಯನ್ನು ನೀಡಿತ್ತು. ಮೋದಿಯವರು ಪ್ರಚಾರಕ್ಕೆ ಏಕೆ ಹೋಗುತ್ತಿಲ್ಲ ಅನ್ನುವುದಕ್ಕೆ ಇಷ್ಟೆಲ್ಲಾ ಕಾರಣಗಳಿದ್ದರೂ ಕೂಡ ಅವರ ಚಾಣಾಕ್ಷ ಬುದ್ದಿ ಯಾವ ರೀತಿಯಾಗಿ ಯೋಚನೆ ಮಾಡುತ್ತಿದೆ ಎಂಬುದನ್ನು ಎಲ್ಲರೂ ಕೂಡ ಕಾದುನೋಡಲೇ ಬೇಕಾಗಿದೆ. 

Edited By

Manjula M

Reported By

Manjula M

Comments