ಈ ಬಾರಿ ಕುಮಾರ ಪರ್ವ ಗ್ಯಾರೆಂಟಿ:- ಎಚ್ ಡಿ ದೇವೆಗೌಡ

11 Apr 2018 12:17 PM | Politics
893 Report

ಈಗಾಗಲೇ ಕರ್ನಾಟಕ ವಿಧಾನ ಸಭಾ ಚುನಾವಣೆ ಶುರುವಾಗಿದ್ದು ದಿನಗಣನೆ ಆರಂಭವಾಗಿದೆ. ಮೇ 12 ರಂದು ವಿಧಾನ ಸಭಾ ಚುನಾವಣೆ ನಡೆಯುತ್ತಿದ್ದು ಮೇ 15 ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ.

ಇದೀಗ ಈ ಸಂಬಂಧ ಮಾತನಾಡಿರುವ ಎಚ್ ಡಿ ದೇವೇಗೌಡ ಅವರು ಈ ಬಾರಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರೆ.ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ,ಜೆಡಿಎಸ್ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಈ ಬಾರಿ ಸ್ವಂತ ಬಲದ ಮೇಲೆ ನಮ್ಮ ಪಕ್ಷ  ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವೇ ಬೇಡ ಎಂದು ಎಚ್.ಡಿ ದೇವೇಗೌಡ ತಿಳಿಸಿದ್ದಾರೆ.

Edited By

Manjula M

Reported By

Manjula M

Comments