ಶೃಂಗೇರಿ ಶಾರದಾಂಬ ದೇಗುಲಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ

21 Mar 2018 3:44 PM | Politics
515 Report

ಶೃಂಗೇರಿ ಶಾರದಾಂಬ ದೇಗುಲಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶಾರದಾಂಬೆ ದರ್ಶನಕ್ಕೆ ಶಲ್ಯ, ಪಂಚೆ ಧರಿಸಿ ಆಗಮಿಸಿದ್ದರು.

ರಾಹುಲ್ ಗಾಂಧಿ ಅವರು ಬಳಿಕ ಭಾರತೀ ತೀರ್ಥ ಸ್ವಾಮೀಜಿಗಳನ್ನು ಭೇಟಿಯಾಗಿ 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ದೇವಸ್ಥಾನದಿಂದ ಗುರುಗಳ ನಿವಾಸಕ್ಕೆ ನಡೆದುಕೊಂಡೇ ತೆರಳಿದ ರಾಹುಲ್ ಸ್ವಾಮೀಜಿಗಳನ್ನು ಏಕಾಂಗಿಯಾಗಿ ಭೇಟಿಯಾದರು.

 

Edited By

Shruthi G

Reported By

Madhu shree

Comments