ಗೌಡರ ಮಕ್ಕಳನ್ನು ಗೆಲ್ಲಿಸಿದ್ದು ಸಾಕು ಎಂದ ಸಿಎಂ ವಿರುದ್ದ ಗುಡುಗಿದ ಎಚ್ ಡಿಕೆ

20 Mar 2018 10:26 AM | Politics
849 Report

ಹೊಳೆನರಸೀಪುರದಲ್ಲಿ ಮಾಜಿ ಸಚಿವ ರೇವಣ್ಣ ವಿರುದ್ಧ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡರನ್ನು ನಿಲ್ಲಿಸುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ವ್ಯಕ್ತಿಯೊಬ್ಬರೊಂದಿಗೆ ನಡೆಸಿದ ಸಂಭಾಷಣೆ ಕುರಿತು ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಅಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ. ಆಡಿಯೋದಲ್ಲಿ ಸಿದ್ದರಾಮಯ್ಯನವರು ನಮ್ಮ ಕುಟುಂಬದ ಬಗ್ಗೆ ಮಾತನಾಡಿದ ಕುರಿತು ನನ್ನ ಗಮನಕ್ಕೆ ಬಂದಿದೆ.

ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಯಾವುದೇ ಪಕ್ಷಕ್ಕೆ ಸಾಂವಿಧಾನಿಕವಾಗಿ ಪ್ರಾಪ್ತವಾದ ಹಕ್ಕು. ಆದರೆ ಬಗ್ಗೆ ನಮ್ಮ ನಕಾರ ಶಬ್ಧವಿಲ್ಲ. ಆದರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಮಾತನಾಡುವಾಗ ಸಿಎಂ ಅವರ ಮಾತಿನಲ್ಲಿ ವ್ಯಕ್ತವಾದ ಧ್ವೇಷ ಭಾವ ಖಂಡನೀಯ. ಅವರ ಈ ದ್ವೇಷ ಸಜ್ಜನ ರಾಜಕೀಯಕ್ಕೆ ಹೆಸರಾದ ಕರ್ನಾಟಕಕ್ಕೂ ಮಾರಕ ಎಂದರು. ದೇವೇಗೌಡರು, ದೇವೇಗೌಡ ಮಕ್ಕಳಿಗೆ ಬೆಂಬಲ ಕೊಟ್ಟಿದ್ದು ಸಾಕು ಎಂದು ಹೇಳುವಾಗ ಮುಖ್ಯಮಂತ್ರಿಗಳು ತಮ್ಮ ಹಿಂದಿನದ್ದನ್ನು ಒಂದು ಕ್ಷಣ ಯೋಚಿಸಬೇಕಿತ್ತು. ಹಲವು ಮುತ್ಸದ್ದಿ ನಾಯಕರಿದ್ದಾಗ್ಯೂ ದೇವೇಗೌಡರು ಸಿದ್ದರಾಮಯ್ಯ ಅವರಿಗೆ ಒತ್ತಾಸೆಯಾಗಿ ನಿಂತು ರಾಜಕೀಯ ಸ್ಥಾನ ಮಾನ ಕಲ್ಪಿಸಿದ್ದರು. ಎಂ.ಪಿ.ಪ್ರಕಾಶ್ ಅವರಂಥ ನಾಯಕರಿದ್ದಾಗ್ಯೂ ಉಪಮುಖ್ಯಂತ್ರಿ ಸ್ಥಾನವನ್ನುವಿವರಿಗೇ ನೀಡಿದ್ದರು. ಸಿದ್ದಾರಾಮಯ್ಯ ಇದನೆಲ್ಲ ಮರೆತು ಮಾತನಾಡಿದಂತಿದೆ. ಈ ದ್ವೇಷಕ್ಕೆ ಜನಾಭಿಪ್ರಾಯದ ಮೂಲಕವೇ ಉತ್ತರಿಸಲು ನಾನು ನಿರ್ಧರಿಸಿದ್ದೇನೆ. ಹೊಳೆನರಸೀಪುರದ ಜನ ನೀಡುವ ತೀರ್ಮಾನ ಸಿದ್ದರಾಮಯ್ಯ ಅವರ ವಿಷದ ಮಾತಿಗೆ ನೀಡುವ ಉತ್ತರವಾಗಲಿದೆ ಎಂದು ತಿರುಗೇಟು ನೀಡಿದರು.

Edited By

Shruthi G

Reported By

Madhu shree

Comments