ಪಾನಿಪುರಿ, ಸೌತೇಕಾಯಿನಲ್ಲಿ ಡ್ರಗ್ಸ್ ಯಿದೆಯಂತೆ: ವಿವಾದದಲ್ಲಿ ಸಿಲುಕಿರುವ ಬಿಜೆಪಿ ಶಾಸಕ

10 Mar 2018 3:48 PM | Politics
883 Report

ನಿಮ್ಮ ಮಕ್ಕಳು ತಿನ್ನುವ ಪಾನಿಪುರಿ, ಸೌತೇಕಾಯಿನಲ್ಲಿ ಡ್ರಗ್ಸ್ ಯಿದೆಯಂತೆ! ಹೀಗಂತ ನಾವು ಹೇಳ್ತಾ ಇಲ್ಲ. ಹೀಗೆ ಹೇಳ್ತಾ ಇರೋದು ಬಿಜೆಪಿ ಶಾಸಕ ಬಿ.ಎನ್ ವಿಜಯಕುಮಾರ್‍. ಹೌದು. ಅವರು ರಾಜ್ಯ ಬಿಜೆಪಿ ನಡೆಸುತ್ತಿರುವ ಬೆಂಗಳೂರು ರಕ್ಷಿಸಿ ಯಾತ್ರೆ ಇಂದು(ಮಾ.10) ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಜಯನಗರದಲ್ಲಿ ಬಿಜೆಪಿ ನಾಯಕರು ಪಾದಯಾತ್ರೆ ನಡೆಸಿದರು.

ಇದೇ ವೇಳೆ ಮಾತನಾಡಿದ ಬಿಜೆಪಿ ಮುಖಂಡ, ಜಯನಗರ ಶಾಸಕ ಬಿ.ಎನ್.ವಿಜಯಕುಮಾರ್ ಗ್ರೆಸ್ ಸರ್ಕಾರ ಬಂದಾಗಿನಿಂದ ಬೆಂಗಳೂರು ಸಮಸ್ಯೆಯ ಬೀಡಾಗಿದೆ. ಡ್ರಗ್ಸ್ ಮಾಫಿಯಾ ಹೆಚ್ಚಿದೆ, ಇರಾನಿಗಳು, ಸೌತ್ ಆಫ್ರಿಕಾದದಿಂದ ಬಂದಿರುವವರು ಡ್ರಗ್ ಮಾಫಿಯಾ ನಡೆಸುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ಇದೇ ವೇಳೆ ಅವರು ಮಾತನಾಡುತ್ತ ಕೆ. ಆರ್ ಪುರಂ ಕ್ಷೇತ್ರದಲ್ಲಿ 118 ಕೊಲೆಗಾಳಾಗಿವೆ. ಇಷ್ಟೆಲ್ಲ ಅಪರಾಧ ಪ್ರಕರಣಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರಕ್ಕೆ ಇವನ್ನೆಲ್ಲ ನಿಯಂತ್ರಣಕ್ಕೆ ತರುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಾನೂನು ಸುವ್ಯವಸ್ಥೆಯ ಬಗ್ಗೆ ಚಿಂತಿಸುತ್ತಿಲ್ಲ ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಇನ್ನು ಶಾಸಕರ ಈ ಮಾತಿಗೆ ವ್ಯಾಪಕ ಆಕ್ರೋಶವ್ಯಕ್ತವಾಗಿದೆ.

Edited By

Shruthi G

Reported By

Madhu shree

Comments