ಅಶ್ಲೀಲ ವೀಡಿಯೊ ನೋಡುವವರಿಗೆ ಗೊತ್ತಿಲ್ಲದ ಶಾಕಿಂಗ್ ವಿಷಯಗಳು!!

02 Mar 2018 10:15 AM | Politics
942 Report

ನೂರಾರು ಅಶ್ಲೀಲ ಸೈಟ್ ಮತ್ತು ಆಪ್‌ಗಳು ಮನುಷ್ಯನ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತಿವೆ ಎಂಬ ರಿಪೋರ್ಟ್ ಒಂದನ್ನು ಲಂಡನಿನ ಒಂದು ರಿಸರ್ಚ್ ಸೆಂಟರ್ ಬಿಡುಗಡೆ ಮಾಡಿದೆ. ರಿಪೋರ್ಟ್‌ನಲ್ಲಿನ ಅಂಶಗಳು ಶಾಕ್ ಆಗುವಂತಿವೆ.ಅಶ್ಲೀಲ ಚಿತ್ರಗಳಿಗೆ ದಾಸರಾಗುತ್ತಿರುವುದರಿಂದ ಮನುಷ್ಯನ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತಿವೆ ನೋಡಿ ..!

ಹೌದು, ನಾವಿಂದು ನಿಮಗೆ ಹೇಳಲಾಗುವುದಿಲ್ಲವಾದರೂ ಹೇಳುವಂತಹ ರಿಪೋರ್ಟ್ ಒಂದನ್ನು ನೀಡುತ್ತಿದ್ದೇವೆ. ಪ್ರತಿಯೊಬ್ಬರ ಬಳಿ ಸ್ಮಾರ್ಟ್‌ಫೋನ್ ಮತ್ತು ಡೇಟಾ ಇರುವುದರಿಂದ ಅಶ್ಲೀಲ ಚಿತ್ರಗಳನ್ನು ನೋಡುವವರ ಪ್ರಮಾಣ ಹೆಚ್ಚಾಗುತ್ತಿದೆ. ಅದರಲ್ಲಿಯೂ ಯುವಕರಂತೂ ಅಶ್ಲೀಲ ಚಿತ್ರಗಳಿಗೆ ದಾಸರಾಗಿಬಿಡುತ್ತಿದ್ದಾರೆ ಎಂದು ರಿಪೋರ್ಟ್ ತಿಳಿಸಿದೆ. ಇಂಟರ್‌ನೆಟ್‌ನಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ದುರುಪಯೋಗ ಕೂಡ ಇದೆ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಷ್ಯಯವೇ ಆದರೂ ಸಹ, ಅಶ್ಲೀಲ ಚಿತ್ರಗಳಿಂದ ಮನುಷ್ಯನ ಮೇಲಾಗುತ್ತಿರುವ ಶಾಕಿಂಗ್ ಪರಿಣಾಮಗಳೇನು? ಮಾನವನ ಆರೋಗ್ಯದ ಮೇಲೆ ಏನೆಲ್ಲಾ ತೊಂದರೆ ಉಂಟಾಗುತ್ತಿದೆ ಎಂಬುದರ ಬಗ್ಗೆ ಸ್ವಲ್ಪ ಗಮನ ಹರಿಸಿ.

ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುವ ಜನರು ಮಾನಸಿಕವಾಗಿ ಹೆಚ್ಚು ದುರ್ಬಲರಾಗುತ್ತಾರೆ ಮತ್ತು ಈಗಾಗಲೇ ದುರ್ಬಲರಾಗಿದ್ದಾರೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಇಷ್ಟು ಮಾತ್ರವಲ್ಲದೇ ಮನುಷ್ಯನ ಮೆಮೊರಿಯನ್ನು ಕಡಿಮೆ ಮಾಡುವ ಸಮಸ್ಯೆಯನ್ನು ಅಶ್ಲೀಲ ವಿಡಿಯೋಗಳು ತರುತ್ತಿವೆಯಂತೆ. ಅಶ್ಲೀಲ ವಿಡಿಯೋಗಳು ನಿಮ್ಮ ಮನಸ್ಸಿನಲ್ಲಿ ಕಿರಿಕಿರಿ ಉಂಟುಮಾಡುತ್ತವಂತೆ. ಮನೆಯವರಾಗಿರಬವುದು ಅಥವಾ ಹೊರಗಿನವರಾಗಿರಬವುದು ನೀವು ಅವರ ಮೇಲೆ ಶೀಘ್ರ ಕೋಪ ಮಾಡಿಕೊಳ್ಳುತ್ತೀರಾ ಮತ್ತು ಮಾನಸಿಕ ಸ್ಥಿಮಿತತೆಯನ್ನು ಕಳೆದು ಜೀವನವೇ ದುರ್ಬರವಾಗುವಂತೆ ಮಾಡಲಿದೆ.

ಮನಸ್ಸಿನ ಬೆಳವಣಿಗೆಯಲ್ಲಿ ವಿಫಲತೆ ಎಂಬುದು ಸಿಂಪಲ್ ಆಗಿ ಕೇಳಿಸಿದರೂ ಇದು ಅತ್ಯಂತ ಅಪಾಯಕಾರಿಯಾಗಿದೆ. ವರದಿಯ ಪ್ರಕಾರ ಈ ರೀತಿಯ ಹೆಚ್ಚಿನ ವೀಡಿಯೋಗಳನ್ನು ನೀವು ನೋಡುವುದರಿಂದ ನಿಮ್ಮ ಯೋಚನಾ ಲಹರಿ ಬದಲಾಗಲಿದೆಯಂತೆ. ಸೆಕ್ಸ್ ಅನ್ನು ಹೆಚ್ಚು ಜನರು ಫ್ಯಾಂಟಸಿ ಎಂದು ಕೊಳ್ಳುತ್ತಾರಂತೆ. ಇಂಟರ್‌ನೆಟ್‌ನಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ದುರುಪಯೋಗ ಕೂಡ ಇದೆ. ಆದರೆ, ಇಂಟರ್‌ನೆಟ್ ಮೂಲಕ ನಮ್ಮನ್ನು ಇತರರು ದುರುಪಯೋಗ ಪಡಿಸಿಕೊಳ್ಳುವವರಿಗಿಂತ, ನಮ್ಮನ್ನು ನಾವೇ ಹಾಳುಮಾಡಿಕೊಳ್ಳಲು ಈ ಅಶ್ಲೀಲ ಚಿತ್ರಗಳೇ ಕಾರಣಗಳಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

Edited By

Shruthi G

Reported By

Madhu shree

Comments