ಬಳ್ಳಾರಿಯಲ್ಲಿ ವಿಪಕ್ಷಗಳಿಗೆ ಮಣ್ಣು ಮುಕ್ಕಿಸಲು ಮುಂದಾದ ಎಚ್ ಡಿಕೆ..!!

21 Feb 2018 3:58 PM | Politics
568 Report

ಫೆ.25 ಹಾಗೂ 26 ರಂದು ಕೂಡ್ಲಿಗಿ ಹಾಗೂ ಸಂಡೂರು ತಾಲೂಕಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಶಿವಪ್ಪ ಹೇಳಿದರು.

ಫೆ.25 ರಂದು ಬೆಳಗ್ಗೆ 11ಕ್ಕೆ ಕೂಡ್ಲಿಗಿಯಲ್ಲಿ ಕಾರ್ಯಕರ್ತರ ಸಮಾವೇಶ, ಮಧ್ಯಾಹ್ನ 1ಕ್ಕೆ ಕೊಟ್ಟೂರಿನಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿ ತಿಪ್ಪೇಸ್ವಾಮಿ ಆಯೋಜಿಸಿರುವ ಸಾಮೂಹಿಕ ವಿವಾಹ ಕಾರ್ಯಕ್ರಮ ಬಳಿಕ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆ. 26ರಂದು ಬೆಳಗ್ಗೆ ಸಂಡೂರು ತಾಲೂಕಿನ ಕುಮಾರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11ಕ್ಕೆ ಬೊಮ್ಮಘಟ್ಟದಲ್ಲಿ ರೈತರ ಸಮಾವೇಶದಲ್ಲಿ ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯ ವಿಜಯನಗರ ಕ್ಷೇತ್ರವನ್ನು ಬಿಎಸ್ಪಿಗೆ ಬಿಟ್ಟುಕೊಡಲಾಗಿದೆ. ಹಬೊಹಳ್ಳಿಯಲ್ಲಿ ಎಂಟು, ಹಡಗಲಿಯಲ್ಲಿ ಮೂವರು,ಸಿರಗುಪ್ಪ ಹಾಗೂ ಬಳ್ಳಾರಿ ಗ್ರಾಮೀಣದಲ್ಲಿ ತಲಾ ಒಬ್ಬ ಸ್ಪರ್ಧಾ ಆಕಾಂಕ್ಷಿಯಿದ್ದಾರೆ. ಸಿರಗುಪ್ಪ ಹಾಗೂ ಬಳ್ಳಾರಿ ಗ್ರಾಮೀಣದಲ್ಲಿ ಅನ್ಯ ಪಕ್ಷದ ನಾಯಕರು ಪಕ್ಷ ಸೇರ್ಪಡೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದಲ್ಲಿ ಇಕ್ಬಾಲ್ ಅಹ್ಮದ್ ಹಾಗೂ ಕುಡಿತಿನಿ ಶ್ರೀನಿವಾಸ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್ ಎರಡನೇ ಪಟ್ಟಿಯಲ್ಲಿ ಇನ್ನುಳಿದ ಆರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇಕ್ಬಾಲ್ ಅಹಮ್ಮದ್ ಈ ತಿಂಗಳಾಂತ್ಯಕ್ಕೆ ಜೆಡಿಎಸ್ ಸೇರಲಿದ್ದಾರೆ. ಅವರ ವ್ಯಕ್ತಿಗತ ಕಾರಣಗಳಿಂದ ಪಕ್ಷ ಸೇರ್ಪಡೆ ವಿಳಂಬವಾಗಿದೆ. ಜಿಲ್ಲೆಯಲ್ಲಿ ಜೆಡಿಎಸ್ ಇಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹೋಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಜೆಡಿಎಸ್ ಬಗ್ಗೆ ಸಿದ್ದರಾಮಯ್ಯ ಗೌರವ ಭಾವನೆ ಇಟ್ಟುಕೊಳ್ಳಬೇಕೆಂದು ಕೆ.ಶಿವಪ್ಪ ತಿಳಿಸಿದರು. ಪಕ್ಷದ ಮುಖಂಡರಾದ ಗೋಪಾಲ್, ರೋಷನ್ ಬಾಷಾ ಇತರರಿದ್ದರು.

ಎರಡು ದಿನಗಳ ಕಾಲ ಕುಮಾರಸ್ವಾಮಿ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ. ಪಕ್ಷ ಸಂಘಟನೆ, ಅಭ್ಯರ್ಥಿಗಳ ಹೆಸರು ಅಂತಿಮ, ಚುನಾವಣಾ ಕಾರ್ಯತಂತ್ರದ ಕುರಿತು ಪಕ್ಷದ ಕಾರ್ಯಕರ್ತರು, ಮುಖಂಡರ ಜೊತೆಯಲ್ಲಿ ಚರ್ಚೆ ನಡೆಸಲಿದ್ದಾರೆ.ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮಾಜಿ ಜಿಲ್ಲಾಧ್ಯಕ್ಷ ಕುಡತಿನಿ ಶ್ರೀನಿವಾಸ್ ಮತ್ತು ಹೊತ್ತೂರು ಮೊಹಮ್ಮದ್ ಇಕ್ಬಾಲ್ ಆಸಕ್ತಿ ಹೊಂದಿದ್ದಾರೆ. ಸಂಡೂರು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ವಸಂತಕುಮಾರ್, ಕೂಡ್ಲಿಗಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಅವರು ಅಭ್ಯರ್ಥಿಯಾಗುವ ಸಾಧ್ಯತೆ ಇದೆ.ಹೊಸಪೇಟೆಯ ವಿಜಯನಗರ ಸಾಮಾನ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್ಪಿ ಸ್ಪರ್ಧೆ ಮಾಡಲಿದೆ. ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು 8 ರಿಂದ 10 ಅಭ್ಯರ್ಥಿಗಳು ಆಸಕ್ತಿ ತೋರಿದ್ದಾರೆ. ಫೆಬ್ರವರಿ 25 ರಂದು ಹಗರಿಬೊಮ್ಮನಹಳ್ಳಿಯ ಸ್ಪರ್ಧಾಸಕ್ತ ಅಭ್ಯರ್ಥಿ ಡಾ. ತಿಪ್ಪೇಸ್ವಾಮಿ ವೆಂಕಟೇಶ್ ಅವರ ನೂತನ ಗೃಹಪ್ರವೇಶ ಕಾರ್ಯಕ್ರಮ ಮತ್ತು ಅವರು ಆಯೋಜಿಸಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.


Edited By

Shruthi G

Reported By

Shruthi G

Comments