ಬಿಜೆಪಿ ಶಾಸಕನ ಸಾವಿಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ

21 Feb 2018 1:20 PM | Politics
424 Report

ಉತ್ತರ ಪ್ರದೇಶದ ಸೀತಾಪುರದ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ ಬಿಜೆಪಿ ಶಾಸಕ ಲೋಕೇಂದ್ರ ಸಿಂಗ್(41) ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. 2012ನೇ ಇಸವಿಯಲ್ಲಿ ನೂರ್ಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಆ ಬಳಿಕ ಮತ್ತೆ 2017ರಲ್ಲಿ ಚುನಾವಣೆಯಲ್ಲಿ ಗೆದ್ದಿದ್ದರು.

ಶಾಸಕರ ಅಕಾಲಿಕ ಮರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಸಿಂಗ್ ಅವರ ಸಮಾಜ ಸೇವೆ ಹಾಗೂ ಉತ್ತರಪ್ರದೇಶದಲ್ಲಿ ಬಿಜೆಪಿಯ ಬೆಳವಣಿಗೆಯಲ್ಲಿ ಅವರು ವಹಿಸಿದ್ದ ಪಾತ್ರವನ್ನ ಎಂದಿಗೂ ಸ್ಮರಿಸುತ್ತೇವೆ ಅಂತ ಮೋದಿ ಟ್ವೀಟ್ ಮಾಡಿದ್ದಾರೆ.

Edited By

Shruthi G

Reported By

Madhu shree

Comments