‘ಕೈ’ ಪಕ್ಷ ಬಿಟ್ಟು ‘ತೆನೆ’ ಹೊತ್ತ ಹಲವು ನಾಯಕರು

20 Feb 2018 3:37 PM | Politics
14694 Report

ಜೆಡಿಎಸ್ ಪಕ್ಷದ ವರಿಷ್ಠರು ವಿಧಾನಸಭಾ ಚುನಾವಣೆಯ ಅಭ್ಯರ್ಥಿಯಾಗಿ ನನ್ನನ್ನು ಘೋಷಿಸಿ, ಕ್ಷೇತ್ರದಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷವನ್ನು ಸಂಘಟಿಸಲು ಸೂಚಿಸಿದ್ದಾರೆ. ಪಕ್ಷದ ಮುಖಂಡರ ಸಲಹೆ ಸೂಚನೆಯಂತೆ ಒಗ್ಗೂಡಿ ಚುನಾವಣೆಯನ್ನು ಎದುರಿಸುವುದಾಗಿ ಶಾಸಕ ಎಂ.ರಾಜಣ್ಣ ತಿಳಿಸಿದರು.

ಕೋಟೆ ವೃತ್ತದ ಬಳಿ ಸೇವ ಸಿಂಧು ಕಚೇರಿ ಸಭಾಂಗಣದಲ್ಲಿ ಹಲವಾರು ಮಂದಿ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡವರನ್ನು ಸ್ವಾಗತಿಸಿ ಅವರು ಮಾತನಾಡಿದರು.ಪಕ್ಷದ ಮುಖಂಡತ್ವದಲ್ಲಿ ಈಗ ಗೊಂದಲಕ್ಕೆ ತೆರೆಬಿದ್ದಿದೆ. ಜೆಡಿಎಸ್ ಪಕ್ಷಕ್ಕೆ ಅಪಾರ ಜನಬೆಂಬಲವಿದೆ. ಆಂತರಿಕ ಭಿನ್ನಾಭಿಪ್ರಾಯಗಳು ಎಲ್ಲೆಡೆ ಇರುತ್ತವೆ. ಅವನ್ನು ಪಕ್ಷದ ಮುಖಂಡರು ಹಾಗೂ ವರಿಷ್ಠರ ಮಾರ್ಗದರ್ಶನ ನೀಡುವ ಮೂಲಕ ಸರಿಹೋಗಲಿದೆ. ಮುಂದೆ ಕುಮಾರಣ್ಣ ಅವರು ಮುಖ್ಯಮಂತ್ರಿ ಆಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಮುನಿಕೃಷ್ಣ, ಶ್ರೀನಿವಾಸ್, ರಾಜಣ್ಣ, ಬಾಲರಾಜು, ಆನಂದ್, ಮುರಳಿ, ವೆಂಕಟೇಶ್, ಗಂಗ, ಮೂರ್ತಿ, ಸುದರ್ಶನ್, ವೆಂಕಟೇಶ್, ಚಿನ್ನಿ, ಮಂಜುನಾಥ್, ನಂದೀಶ್, ಶಿವಕುಮಾರ್ ಮುಂತಾದವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.ನಗರಸಭೆ ಸದಸ್ಯ ಅಫ್ಸರ್ಪಾಷ, ಮುರಳಿ, ರಹಮತ್ತುಲ್ಲ, ತಾದೂರು ರಮೇಶ್, ಮುನಿರೆಡ್ಡಿ ಹಾಜರಿದ್ದರು.

 

Edited By

Shruthi G

Reported By

Shruthi G

Comments