ಅನ್ನದಾನಿಗೆ ಜೈ ಎಂದು ತೆನೆ ಕಟ್ಟಲು ಸಿದ್ದರಾದ ಮಳವಳ್ಳಿ ಜನತೆ..!!

19 Feb 2018 10:49 AM | Politics
7776 Report

ಕರ್ನಾಟಕ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯಗೊಂಡಿವೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿದೆ. ಕರ್ನಾಟಕದ ತುಂಬೆಲ್ಲ ಜೆಡಿಎಸ್ ನ ಅಲೆ ತುಂಬಿದೆ.

ಇತ್ತೀಚಿಗೆ ನಡೆದ ವಿಕಾಸಪರ್ವ ಸಮಾವೇಶವೇ ಇದಕ್ಕೆ ಸಾಕ್ಷಿ ಎಂಬಂತಿದೆ. ಈ ಬಾರಿ ಮಳವಳ್ಳಿ ಕ್ಷೇತ್ರದ ಚುನಾವಣೆ ಬಾರಿ ಕುತೂಹಲ ಮೂಡಿಸಿದೆ. ಬಿಜೆಪಿಗೆ ಮಂಡ್ಯ ಜಿಲ್ಲೆಯಲ್ಲಿ ನೆಲೆ ಇಲ್ಲ. ಮಾಜಿ ಸಚಿವ ಬಿ.ಸೋಮಶೇಖರ್ ಪಕ್ಷ ಸೇರ್ಪಡೆ ಹಾಗು ಸ್ಪರ್ಧೆಯಿಂದ ಒಂದಷ್ಟು ಬಲ ತಂದು ಕೊಟ್ಟಿದ್ದರು ಸಹ ಗೆಲುವು ಕಾಣುವ ಸಾಧ್ಯತೆಗಳು ಕಡಿಮೆ. ಇನ್ನು ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾದ ನರೇಂದ್ರಸ್ವಾಮಿ ಅವರು ಸ್ಪರ್ಧಿಸಲಿದ್ದಾರೆ. ಆದರೂ ಸಹ ಈ ಬಾರಿ ಮಳವಳ್ಳಿಯಲ್ಲಿ ಜೆಡಿಎಸ್ ಗೆಲುವು ಸಾಧಿಸುವುದರಲ್ಲಿ ಎರಡು ಮಾತಿಲ್ಲ.ಅನ್ನದಾನಿ ಅವರು ಸರಳ ಸಜ್ಜನಿಕೆಯ ವ್ಯಕ್ತಿ.

ನರೇಂದ್ರಸ್ವಾಮಿಯವರ ಮೇಲಿನ ಆಡಳಿತ ವಿರೋಧಿ ಅಲೆ, ಕುಮಾರಸ್ವಾಮಿ ಖ್ಯಾತಿ, ನರೇಂದ್ರಸ್ವಾಮಿ ಮೇಲಿನ ಮರಳು ದಂಧೆಯ ಅಪಖ್ಯಾತಿ, ಬಿಎಸ್ಪಿ ಯೊಂದಿಗಿನ ಮೈತ್ರಿ ಸಹಾಯಕವಾಗಬಹುದು. ಹೆಚ್ಚು ಕ್ರಿಯಾಶೀಲರಾಗಿರುವ ಅನ್ನದಾನಿ ಈ ಬಾರಿ ಮತ್ತಷ್ಟು ಹುರುಪಿನಿಂದ ಮತಯಾಚನೆಯಲ್ಲಿ ತೊಡಗಿದ್ದಾರೆ. ಕಳೆದ ವಾರವಷ್ಟೇ ನಡೆದ ಕುಮಾರಸ್ವಾಮಿಯವರ "ಕುಮಾರ ಪರ್ವ" ಯಾತ್ರೆಯಲ್ಲಿ ಸೇರಿದ್ದ ಜನಸ್ತೋಮ ಕಂಡು, ಅನ್ನದಾನಿ ಅವರ ಆತ್ಮಸ್ಥೈರ್ಯ ಮತ್ತಷ್ಟು ಹೆಚ್ಚಿದೆ. ಜನರ ಅಭಿಪ್ರಾಯದ್ಲಲಿ ಅನ್ನದಾನಿ ಮೇಲಿರುವ ಅನುಕಂಪದ ಅಲೆ, ಗೆಲುವಿನ ದಡ ಸೇರಿಸಬಹುದಾದ ಲಕ್ಷಣಗಳು ಮೇಲ್ನೋಟಕ್ಕೆ ಗೋಚರಿಸುತ್ತಿವೆ. ಇವೆಲ್ಲ ಕಾರಣಗಳಿಂದ ಮಳವಳ್ಳಿ ಕ್ಷೇತ್ರದಲ್ಲಿ ತೆನೆ ಕಟ್ಟಲು ಜನರು ರೆಡಿಯಾಗಿದ್ದಾರೆ ಎಂಬುದು ಮೂಲಲಗಳಿಂದ ತಿಳಿದು ಬಂದಿದೆ.

Edited By

Shruthi G

Reported By

Madhu shree

Comments