ಚುನಾವಣೆ ಹಿನ್ನಲೆಯಲ್ಲಿ ಬಜೆಟ್ ಮೇಲೆ ಹೆಚ್ಚಿದ ನಿರೀಕ್ಷೆಗಳು

16 Feb 2018 12:22 PM | Politics
299 Report

2013-14 ಬಜೆಟ್ ಗಾತ್ರ 1,21,611 ಲಕ್ಷ ಕೋಟಿ ರೂ.ಗಳು. 2017-18 ರ ಬಜೆಟ್ ಗಾತ್ರ 1,86, 561 ಲಕ್ಷ ಕೋಟಿ ರೂ.ಗಳು. ಬಜೆಟ್ ನನ್ನ ಪಾಲಿಕೆ ಅಂಕಿ ಅಂಶಗಳ ಕಸರತ್ತು ಅಲ್ಲ. ನಿರ್ಜೀವ ಲೆಕ್ಕವಲ್ಲ, ರಾಜ್ಯದ ಪ್ರತಿ ಪ್ರಜೆಯ ಮನೆಯ ಲೆಕ್ಕ ಎಂದು ಸಿಎಂ ಸಿದ್ದರಾಮಯ್ಯನವರು ತಮ್ಮ ಬಜೆಟ್ ಮಂಡನೆಯನ್ನು ಆರಂಭಿಸಿದರು.

ಶೂನ್ಯ ಬಡ್ಡಿದರದಲ್ಲಿ 3 ಲಕ್ಷದ ತನಕ ಸಾಲ ನೀಡಲಾಗುತ್ತದೆ. ರೈತರಿಗೆ ನ್ಯಾಯಬದ್ಧ ಬೆಲೆ ಸಿಗುವಂತೆ ಮಾಡಲು ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ 157 ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದ್ದು, ದೇಶಕ್ಕೆ ಮಾದರಿಯಾಗಿದೆ. ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಲ ಪಡೆದ ರೈತರು ಮೃತಪಟ್ಟರೆ 1 ಲಕ್ಷ ರೂ. ಸಾಲವನ್ನು ಮನ್ನಾ ಮಾಡಲಾಗುತ್ತದೆ. ಬೆಂಗಳೂರು ನಗರದ ಕಸದ ಸಮಸ್ಯೆ ನಿವಾರಿಸಲು 13 ಸಾವಿರ ಟನ್ ಕಸವನ್ನು ರೈತರಿಗೆ ಕಾಂಪೋಸ್ಟ್ ಮಾಡಲು ಒದಗಿಸಲಾಗಿದೆ. 5.88 ಲಕ್ಷ ರೈತರಿಗೆ ಸೂಕ್ಷ್ಮ ನೀರಾವರಿ ವ್ಯವಸ್ಥೆ ಅಳವಡಿಕೆ ಮಾಡಿಕೊಳ್ಳಲು ಸಹಾಯಧನ ನೀಡಲಾಗಿದೆ. ಸಾವಯವ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಅಳವಡಿಸಲು 203 ಕೋಟಿ ವೆಚ್ಚ ಮಾಡಲಾಗಿದೆ. ರೈತರಿಗೆ ಸಾಲದ ಹೊರೆ ಕಡಿಮೆ ಮಾಡಲು 8,165 ಕೋಟಿ ಸಾಲವನ್ನು ಮನ್ನಾ ಮಾಡಿದೆ. ವೇತನ ಆಯೋಗ ರಚನೆ ಮಾಡಲು ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಆಯೋಗ ವರದಿ ಸಲ್ಲಿಸಿದೆ.

ಆಯೋಗ ಶೇ 30ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಿದೆ. ಇದರಿಂದ 5.93 ನೌಕರರಿಗೆ ಅನುಕೂಲವಾಗಿದೆ. ಆಯೋಗದ ವರದಿಯನ್ನು ಏಪ್ರಿಲ್ 2018ರ ವರೆಗೆ ವಿಸ್ತರಣೆ ಮಾಡಲಾಗಿದೆ. ಇದರಿಂದ ಸರ್ಕಾರ 10,508 ಹೆಚ್ಚುವರಿ ಹೊರೆ ಆಗಲಿದೆ. ನೋಟು ನಿಷೇಧದಿಂದ ಮುದ್ರಾಂಕ ಮತ್ತು ನೋಂದಣಿ ಶುಲ್ಕದ ಸಂಗ್ರಹದಲ್ಲಿ ಹಿನ್ನಡೆಯಾಗಿದೆ. ಮಹಿಳಾ ಉದ್ಯಮಿಗಳಿಗೆ ಕರ್ನಾಟಕ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಮುಕ್ತ ಕಂಠದ ಪ್ರಶಂಸೆ ವ್ಯಕ್ತವಾಗಿದೆ. 5 ವರ್ಷಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಬಂಡವಾಳವನ್ನು ತಂದು ರಾಜ್ಯದ ಯುವ ಜನರಿಗೆ ಉದ್ಯೋಗ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ನಾನು ರೈತರ ಮಗ ಕೃಷಿಭಾಗ್ಯ ಮುಂತಾದ ಯೋಜನೆ ಮೂಲಕ ಅವರ ಋಣ ತೀರಿಸುವ ಪ್ರಯತ್ನ ಮಾಡಿದ್ದೇನೆ. ನಮ್ಮದು ರೈತ ಪರವಾದ ಸರ್ಕಾರ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ನಾನು ರೈತರ ಮಗ ಕೃಷಿಭಾಗ್ಯ ಮುಂತಾದ ಯೋಜನೆ ಮೂಲಕ ಅವರ ಋಣ ತೀರಿಸುವ ಪ್ರಯತ್ನ ಮಾಡಿದ್ದೇನೆ. ನಮ್ಮದು ರೈತ ಪರವಾದ ಸರ್ಕಾರ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ.ಇಂದು ನಮ್ಮ ನಾಡಿನಲ್ಲಿ ಯಾರೂ ಹಸಿದು ಮಲಗಬೇಕಾಗಿಲ್ಲ. ಹಸಿವಿನ ವಿರುದ್ಧದ ಹೋರಾಟದಲ್ಲಿ ಸರ್ಕಾರ ಗೆದ್ದಿದೆ. ನಮಗೆ ತೃಪಿ ಇದೆ ರಾಜ್ಯದ ಬೊಕ್ಕಸದಲ್ಲಿರುವುದು ಜನರ ಬೆವರ ದುಡ್ಡು. ನಾನು ಅದನ್ನು ನಿರ್ವಹಿಸುವ ಟ್ರಸ್ಟಿ ಮಾತ್ರ. ಪ್ರತಿ ಪೈಸೆಗೆ ಲೆಕ್ಕ ಕೇಳುವ ಹಕ್ಕು ಜನರಿಗೆ ಇದೆ. ಅದನ್ನು ನಾನು ಅತ್ಯಂತ ಗೌರವಿಸುತ್ತೇನೆ ಎಂದರು.

 

 

 

 

 

 

 

 


 


 

 

Edited By

Shruthi G

Reported By

Madhu shree

Comments