ಚುನಾವಣಾ ಅಖಾಡಕ್ಕೆ ಸರ್ಕಾರಿ ವೈದ್ಯ..!!

14 Feb 2018 4:42 PM | Politics
7423 Report

ಸರ್ಕಾರಿ ವೈದ್ಯರೊಬ್ಬರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಎಸ್‌ಎನ್ಆರ್ ಜಿಲ್ಲಾಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಕ ಡಾ. ಡಿ.ಕೆ.ರಮೇಶ್ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ.ಡಾ. ಡಿ.ಕೆ.ರಮೇಶ್ ಕೋಲಾರ ಅವರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇಂದು ವೈದ್ಯರ ಹುಟ್ಟುಹಬ್ಬದ ಹಿನ್ನೆಲೆ ಕ್ಷೇತ್ರದ ಜನರಿಗೆ ಉಚಿತವಾಗಿ ಪ್ರವಾಸ ಭಾಗ್ಯ ಸಿಕ್ಕಿದೆ.

ಐಎಎಸ್ ಅಧಿಕಾರಿ ಡಿ.ಕೆ.ರವಿ ಹಾಗೂ ಡಾ. ಡಿ.ಕೆ.ರಮೇಶ್ ಅಭಿಮಾನಿಗಳಿಂದ ಇಂದು ತಾಲೂಕಿನ ವೇಮಗಲ್‌ನಲ್ಲಿ ಬೃಹತ್ ಸಮಾವೇಶ, ಹೆಲ್ತ್ ಕ್ಯಾಂಪ್ ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಕ್ಷೇತ್ರದ ಜನರಿಗೆ 100 ಕ್ಕೂ ಹೆಚ್ಚು ಸಾರಿಗೆ ಬಸ್‌ಗಳ ಮೂಲಕ ಜನರಿಗೆ ಧರ್ಮಸ್ಥಳ, ಪೆನ್ನಗೊಂಡ ದರ್ಗಾ, ವೆಲಾಂಗಣಿ ಪುಣ್ಯಕ್ಷೇತ್ರಗಳಿಗೆ ಉಚಿತ ಪ್ರವಾಸ ಭಾಗ್ಯ ನೀಡಿದರು. ಡಿ.ಕೆ.ರವಿ ಅವರ ಹೆಸರಲ್ಲಿ ಉಚಿತ ಹೆಲ್ತ್ ಕ್ಯಾಂಪ್‌ಗಳು, 18 ಸಾವಿರಕ್ಕೂ ಹೆಚ್ಚು ಉಚಿತ ಶಸ್ತ್ರಚಿಕಿತ್ಸೆ ಮಾಡಿ ವೈದ್ಯ ಡಾ. ರಮೇಶ್ ಅವರು ಜಿಲ್ಲೆಯ ಜನಮನ ಗೆದ್ದಿದ್ದಾರೆ. 

Edited By

Shruthi G

Reported By

Shruthi G

Comments