ಕಾಂಗ್ರೆಸ್ ನ ವಿಕೆಟ್ ತನ್ನತ್ತ ಸೆಳೆಯುವ ಯತ್ನದಲ್ಲಿ ಸಫಲಗೊಂಡ ಬಿಜೆಪಿ

07 Feb 2018 6:28 PM | Politics
806 Report

ವಿಧಾಸಭಾ ಚುನಾವಣೆ ಸಮಿಸುತ್ತಿದ್ದಂತೆ ರಾಮನಗರ ವಿಧಾನ ಸಭಾ ಕ್ಷೇತ್ರದಲ್ಲಿ ರಾಜಕೀಯ ಗರಿಗೆದರುತ್ತಿದ್ದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ತೊಡೆ ತಟ್ಟಲು ಬಿಜೆಪಿ ಸಜ್ಜಾಗುತ್ತಿದೆ. ರಾಮನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಾಗಿ ಹುಡುಕಾಟದಲ್ಲಿ ತೊಡಗಿದ್ದ ಬಿಜೆಪಿ ನಾಯಕರಿ ಕಾಂಗ್ರೆಸ್ ಮುಖಂಡ ದಿ. ಮರಿದೇವರು ಪತ್ನಿ ಮಂಜುಳಾ ಅವರೊಂದಿಗೆ ಮಂಗಳವಾರ ಬೆಳಗ್ಗೆ ಅವರ ನಿವಾಸದಲ್ಲಿ ಸುದೀರ್ಘವಾಗಿ ಚರ್ಚೆ ನೆಡೆಸಿದರು.

ಇದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಬಿಜೆಪಿ ಮುಖಂಡ ಎಂ ರುದ್ರೇಶ್ ಅವರೊಂದಿಗೆ ಸ್ಥಳೀಯರು ಮಂಜುಳಾ ಮರಿದೇವರು ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದರು. ಮಂಜುಳಾ ಅವರನ್ನು ಬಿಜೆಪಿ ಸೇರ್ಪಡೆಯಾಗುವಂತೆ ಆಹ್ವಾನ ನೀಡಿದ ಬಿಜೆಪಿ ನಾಯಕರು,ವಿಧಾನ ಸಭೆ ಚುನಾವಣೆ ಬಗ್ಗೆಯೂ ಚರ್ಚೆ ನಡೆಸಿದರು ಎನ್ನಲಾಗಿದೆ. ಪಕ್ಷಕ್ಕೆ ಆಹ್ವಾನ : ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರುದ್ರೇಶ್ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಬುಡಮಟ್ಟದಿಂದ ಸಂಘಟಿಸಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ೫೯ ಸಾವಿರ ಮತಗಳು ಮರಿದೇವರು ಪಡೆದಿದ್ದರು .ಆದ್ರೆ ಅಕಾಲಿಕ ನಿಧನದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಅವರ ಪತ್ನಿ ಮಂಜುಳಾ ಮರಿದೇವರು ಅವರನ್ನು ಕಡೆಗಣಿಸಲಾಗಿತ್ತು. ಇದರಿಂದ ಅವರು ರಾಜಕೀಯದಿಂದ ದೂರ ಉಳಿದಿದ್ದರು.ಸಮಾಜ ಸೇವೆ ಮತ್ತು ರಾಜಕಾರಣದಲ್ಲಿ ಉತ್ತಮ ಹೆಸರು ಮಾಡಿದ್ದ ಮರಿದೇವರು ಅವರಿಗೆ ಕ್ಷೇತ್ರದಾದ್ಯಂತ ಅವರದೇ ಅಭಿಮಾನಿಗಳಿದ್ದಾರೆ.ಈ ನಿಟ್ಟಿನಲ್ಲಿ ಅವರ ಪತ್ನಿ ಮಂಜುಳಾ ಮರಿದೇವರು. ಅವರನ್ನು ಪಕ್ಷಕ್ಕೆ ಆಹ್ವಾನಿಸಲು ಬಂದಿದ್ದೇನೆ ಎಂದು ತಿಳಿಸಿದರು.ಮಂಜುಳಾ ಮರಿದೇವರು ಅವರು ಬಿಜೆಪಿ ಬಂದರೆ ಗೌರವಯುತವಾಗಿ ನಡೆಸಿಕೊಳ್ಳುವುದಲ್ಲದೆ , ಉತ್ತಮ ಸ್ಥಾನಮಾನ ನೀಡಲಾಗುವು. ಸಂದರ್ಭ ಬಂದರೆ ಪಕ್ಷದ ಅಭ್ಯರ್ಥಿಯಾಗಲು ವರಿಷ್ಠರೊಂದಿಗೆ ಚರ್ಚಿಸುವುದಾಗಿ ರುದ್ರೇಶ್ ತಿಳಿಸಿದರು. ಮಂಜುಳಾ ಮರಿದೇವರು ಮಾತನಾಡಿ. ನಾನು ಎರಡು ಬಾರಿ ತಾಲೂಕು ಪಂಚಾಯತಿ ಸದಸ್ಯೆಯಾಗಿ, ಒಂದು ಬಾರಿ ಜಿಲ್ಲಾ ಪಂಚಾಯತಿ ಸದಸ್ಯೆಯಾಗಿ ಮತ್ತು ಕಾಂಗ್ರೆಸ್ ಮಹಿಳಾ ಘಟಕದಲ್ಲಿ ಉತ್ತಮ ಸೇವೆ ಮಾಡಿದ್ದೇನೆ. ಆದರೂ ಕಡೆಕಣಿಸಲಾಗಿದೆ. ಇದು ಬೇಸರ ತರಿಸಿದೆ ಎಂದರು . ಬಿಜೆಪಿ ಮುಖಂಡರಾದ ಎಸ್ ಆರ್ ನಾಗರಾಜ್ , ಪದ್ಮನಾಭ , ಜಯಣ್ಣ (ಶಿವಮಾದು ), ಬಸವನಪುರ ರಾಮಣ್ಣ , ರುದ್ರದೇವರು, ಪ್ರವೀಣ್ ಗೌಡ ಹಾಜರಿದ್ದರು.

Edited By

Shruthi G

Reported By

Madhu shree

Comments