ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆ ಜಯ ಕಟ್ಟಿಟ್ಟ ಬುತ್ತಿ..!!

07 Feb 2018 10:04 AM | Politics
8141 Report

ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗಳು ಬಿರುಸುಗೊಂಡಿವೆ. ಜೆಡಿಎಸ್ ಅಬ್ಬರದ ಚುನಾವಣಾ ಪ್ರಚಾರವನ್ನು ಈಗಾಗಲೇ ಪ್ರಾರಂಭಿಸಿದೆ.  ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ಅಧಿಕೃತ ಅಭ್ಯರ್ಥಿಗಳು ಇನ್ನೂ ಪ್ರಕಟವಾಗಿಲ್ಲ. ಹಾಲಿ ಜೆಡಿಎಸ್ ಶಾಸಕರ ಟಿಕೆಟ್ ಖಚಿತವಾಗಿದ್ದು, ಕ್ಷೇತ್ರಾದ್ಯಂತ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.ಕುಣಿಗಲ್ ಕ್ಷೇತ್ರವನ್ನು ವಶಕ್ಕೆ ತೆಗೆದುಕೊಳ್ಳುವ ತಂತ್ರ ಹೆಣೆಯುತ್ತಿದೆ.

ತುಮಕೂರು ಜಿಲ್ಲೆ ಕುಣಿಗಲ್ ವಿಧಾನಸಭಾ ಕ್ಷೇತ್ರ ರಾಜಕೀಯವಾಗಿ ತನ್ನದೇ ಆದ ಇತಿಹಾಸ ಹೊಂದಿದೆ.ಒಕ್ಕಲಿಗರ ಪ್ರಾಬಲ್ಯ ಇಲ್ಲಿ ಹೆಚ್ಚಾಗಿರುವುದೇ ಇದಕ್ಕೆ ಕಾರಣ. 2013ರಲ್ಲಿ  ಜೆಡಿಎಸ್‍ನ ಡಿ.ನಾಗರಾಜಯ್ಯನವರು ಜಯಗಳಿಸಿದ್ದರು. ಆದರೆ, ಇವರ ಸಹೋದರ ಡಿ.ಕೃಷ್ಣಕುಮಾರ್ ಬಿಜೆಪಿಯಿಂದ ಸ್ಪರ್ಧಿಸಿ ಎರಡು ಬಾರಿ ಸೋಲನನುಭವಿಸಿದರು.ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಅದರಲ್ಲೂ ಹುತ್ರಿದುರ್ಗ, ಹುಲಿಯೂರು ದುರ್ಗ ಮತ್ತು ಅಮೃತೂರು ಹೋಬಳಿಗಳಲ್ಲಿ ಅತಿ ಹೆಚ್ಚಿನ ಮತದಾರರಿದ್ದು,ಈ ಭಾಗ ಜೆಡಿಎಸ್‍ನ ಭದ್ರಕೋಟೆಯಾಗಿದೆ.ಈ ಬಾರಿ ಬಿಜೆಪಿಯಿಂದ ಪುನಃ ಸ್ಪರ್ಧೆಗೆ ಇಳಿಯಲು ಕೃಷ್ಣಕುಮಾರ್ ಸಜ್ಜಾಗಿದ್ದು,ಇನ್ನು ಕಾಂಗ್ರೆಸ್ ಪಕ್ಷದಲ್ಲೂ ಕೂಡ ಗೊಂದಲ ಗೂಡಾಗಿದ್ದು, ಕಳೆದ ಬಾರಿ ಶಾಸಕರಾಗಿದ್ದ ಬಿ.ಬಿ.ರಾಮಸ್ವಾಮಿಗೌಡ ಬದಲಿಗೆ ಡಿ.ಕೆ.ಶಿವಕುಮಾರ್ ಅವರ ಸಂಬಂಧಿ ಡಾ.ರಂಗನಾಥ್ ಅವರನ್ನು ಕಣಕ್ಕಿಳಿಸುವ ಪ್ರಯತ್ನ ನಡೆಯುತ್ತಿದೆ.ಕಾಂಗ್ರೆಸ್‍ನ ಮೂಲದ ಪ್ರಕಾರ ಅವರೇ ಅಭ್ಯರ್ಥಿ ಎಂದು ಕೇಳಿ ಬರುತ್ತಿದೆ. ಇದರಿಂದ ಕೋಪಿತಗೊಂಡಿರುವ ರಾಮಸ್ವಾಮಿಗೌಡ ಅವರು 2018ರ ಚುನಾವಣೆಯಲ್ಲಿ ಬಂಡಾಯವಾದರೂ ಆಶ್ಚರ್ಯವಿಲ್ಲ. ಹೀಗಾದರೆ ಕಾಂಗ್ರೆಸ್‍ನ ಅಧಿಕೃತ ಅಭ್ಯರ್ಥಿಗೆ ಅಡಚಣೆ ಯಾಗುತ್ತದೆ.ಇದು ಜೆಡಿಎಸ್ ಗೆ ಪ್ಲಸ್ ಪಾಯಂಟ್ ಆಗಲಿದೆ.

ಕುಣಿಗಲ್ ತಾಲೂಕಿನಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಿದ್ದು, ಬಿಜೆಪಿಗೆ ಗೆಲುವು ಅಷ್ಟು ಸುಲಭವಲ್ಲ. ಏಕೆಂದರೆ, ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ರುವ ಶಾಸಕ ಡಿ.ನಾಗ ರಾಜಯ್ಯ ಮತ್ತು ಮಕ್ಕಳು ರಾಜಕೀಯ ತಂತ್ರಗಾರಿಕೆ ಜೋರಾ ಗಿಯೇ ಇದೆ.  ಜೆಡಿಎಸ್‍ನ 40 ಸಾವಿರಕ್ಕೂ ಹೆಚ್ಚು ಸಾಂಪ್ರದಾಯಿಕ ಮತಗಳಿವೆ. ಇದರಿಂದ ಅವರ ಗೆಲುವು ಸುಲಭವಾಗುವ ಸಾಧ್ಯತೆಗಳಿವೆ ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ. ಇವರು ಬಿಜೆಪಿಗೆ ಮಗ್ಗುಲ ಮುಳ್ಳಾಗುವ ಸಾಧ್ಯತೆಯಿದೆ. ಅಲ್ಲದೆ, ಈ ಬಾರಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿಯೇ ನೋಡಬೇಕೆಂಬ ಅಚಲ ನಿರ್ಧಾರ ಕ್ಷೇತ್ರದ ಮತದಾರರಲ್ಲಿ ಇರುವುದರಿಂದ ಈ ಕ್ಷೇತ್ರ ಪುನಃ ಜೆಡಿಎಸ್ ತೆಕ್ಕೆಗೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ಮತದಾರರ ಅಭಿಪ್ರಾಯವಾಗಿದೆ. 

Edited By

Shruthi G

Reported By

Shruthi G

Comments