ಕಾಂಗ್ರೆಸ್ ನ ಇಬ್ಬರು ಪ್ರಭಾವಿ ಮುಖಂಡರು ಜೆಡಿಎಸ್ ಸೇರಲು ಡೇಟ್ ಫಿಕ್ಸ್

07 Feb 2018 9:26 AM | Politics
10296 Report

ಕೊಪ್ಫಳ ಜಿಲ್ಲೆಯಲ್ಲಿ ಜೆಡಿಎಸ್‌ ಶಕ್ತಿ ಹೆಚ್ಚಿದೆ. ದಿನೇ ದಿನೇ ರಾಜ್ಯಾದ್ಯಂತ ಜಾತ್ಯಾತೀತ ಜನತಾದಳಕ್ಕೆ ನಾಡಿನ ಮೂಲೆ-ಮೂಲೆಗಳಿಂದ ಸಾಕಷ್ಟು ಜನಬೆಂಬಲ ವ್ಯಕ್ತವಾಗುತ್ತಿದೆ.  ಅನೇಕ ಸಮುದಾಯಗಳ ನಾಯಕರು ಕುಮಾರಸ್ವಾಮಿಯವರ ನಾಯಕತ್ವದಿಂದ ಪ್ರಭಾವಿತರಾಗಿ ಜೆಡಿಎಸ್ ಗೆ ಸೇರ್ಪಡೆಯಾಗುತ್ತಿದ್ದಾರೆ.

ಕಳೆದು ಹತ್ತು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು, ಕೋಮುವಾದ, ಜಾತೀಯತೆ ಮತ್ತು ರೈತರ ಆತ್ಮಹತ್ಯೆಗಳನ್ನೇ ಅಭಿವೃದ್ದಿಯನ್ನಾಗಿ ಮಾಡಿವೆ. ಈ ರಾಷ್ಟ್ರೀಯ ಪಕ್ಷಗಳ ಕುಟಿಲ ನೀತಿಗಳಿಂದ ರಾಜ್ಯಕ್ಕೆ ಕಾವೇರಿ, ಮಹದಾಯಿ ನೀರು ಹಂಚಿಕೆಯಲ್ಲಿ ಸಾಕಷ್ಟು ತಾರತಮ್ಯ ನೀತಿಯನ್ನ ಅನುಸರಿಸಲಾಗುತ್ತಿದೆ. ಇದೆಲ್ಲದರಿಂದ ಬೇಸತ್ತ ಜನರು ತಮ್ಮ ಹಕ್ಕುಗಳಿಗಾಗಿ ಜೆಡಿಎಸ್ ಪಕ್ಷವೇ ಸೂಕ್ತವೆಂದು ನಿರ್ಧರಿಸಿ, ಬಿಜೆಪಿ ಮತ್ತು ಕಾಂಗ್ರೆಸ್‍ನ  ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಜನತಾದಳಕ್ಕೆ ಸೇರ್ಪಡೆಯಾಗುತ್ತಿದ್ದಾರೆ.ಒಂದು ಕಾಲದಲ್ಲಿ ಹೈದ್ರಾಬಾದ್ ಕರ್ನಾಟಕದ ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ಭಾಗದಲ್ಲಿ ‘ಧಣಿ’ ಎಂದೇ ಕರೆಯಲ್ಪಡುತ್ತಿದ್ದ ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಹಾಗೂ ಲೋಕಸಭೆಯ ಮಾಜಿ ಸದಸ್ಯ ಎಚ್.ಜಿ.ರಾಮುಲು ಮತ್ತು ಅವರ ಪುತ್ರ ವಿಧಾನಪರಿಷತ್ತಿನ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ್ ಅವರು  ಮಾಜಿ ಪ್ರಧಾನಿ ದೇವೆಗೌಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ  ಬೆಂಬಲ ಘೋಷಿಸಿದರು. ಇದೇ ತಿಂಗಳ 17ರಂದು ಬೆಂಗಳೂರಿನಲ್ಲಿ ಅಥವಾ ಕೊಪ್ಪಳದಲ್ಲಿ ಸಮಾವೇಶ ನಡೆಸುವ ಸಂಭವವಿದ್ದು, ಆ ದಿನವೇ ಉಭಯ ಮುಖಂಡರು ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಹೆಚ್.ಜಿ.ರಾಮುಲು ನಿವಾಸಕ್ಕೆ ದೇವೆಗೌಡರೆ ಖುದ್ದು ಭೇಟಿ ನೀಡಿ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಮನವಿ ಮಾಡಿದರು. ಅದಕ್ಕೆ ಹೆಚ್.ಜಿ.ರಾಮುಲು ಸಮ್ಮತಿ ಸೂಚಿಸಿದರು. 

Edited By

Shruthi G

Reported By

Shruthi G

Comments